ಪಾವಗಡ: ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಹೊರವಲಯದಲ್ಲಿ ಇರುವ ಈಶ್ವರ ದೇವಾಲಯದ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಬಾಲಾಜಿ ಮಠವನ್ನು ಗುರುವಾರದಂದು ಭಕ್ತಿಭಾವದಿಂದ ಪ್ರತಿಷ್ಠಾಪನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಶ್ರೀ ನಾಗಾನಂದ ಸ್ವಾಮೀಜಿ ಸೇರಿದಂತೆ ಅನೇಕ ಭಕ್ತಾದಿಗಳು ಭಾಗವಹಿಸಿ ಪೂಜೆ, ಭಜನೆ ಹಾಗೂ ಧ್ಯಾನ ಕಾರ್ಯಕ್ರಮಗಳಲ್ಲಿ ತೊಡಗಿದರು.
ಮಠದ ಆಶಯವಾಗಿ “ಶ್ರೀ ನಾದಾಬ್ರಹ್ಮ ಯೋಗದಿಂದ ಆರೋಗ್ಯ ಕ್ಷೇಮ ಮತ್ತು ಯೋಗ ಕ್ಷೇಮ” ಎಂಬ ಸಂದೇಶವನ್ನು ಪ್ರಚಾರ ಮಾಡಲಾಯಿತು. ನಾದಾಬ್ರಹ್ಮ ಯೋಗದ ಮೂಲಕ ದೈಹಿಕ–ಮಾನಸಿಕ ಆರೋಗ್ಯ, ಆತ್ಮಶುದ್ಧಿ ಹಾಗೂ ಆಧ್ಯಾತ್ಮಿಕ ಶಾಂತಿಯ ಅನುಭವವನ್ನು ಪಡೆಯಬಹುದು ಎಂದು ಸ್ವಾಮೀಜಿಯವರು ಭಕ್ತರಿಗೆ ತಿಳಿಸಿದರು.
“ಭವರೋಗ ಪಿಂಡದಿಂದ ಆರೋಗ್ಯ ಪಿಂಡ, ಮಂತ್ರ ಪಿಂಡ, ಯೋಗ ಪಿಂಡ ಮತ್ತು ಕೊನೆಗೆ ಬ್ರಹ್ಮಾಂಡ ಪಿಂಡದತ್ತ ಸಾಗುವ ಪಯಣವೇ ನಾದಾಬ್ರಹ್ಮ ಯೋಗ,” ಎಂದು ಸ್ವಾಮೀಜಿಯವರು ಉಪದೇಶಿಸಿದರು.
ಈ ಯೋಗದಿಂದ ಹೃದಯರೋಗ, ತಲೆನೋವು, ಹೊಟ್ಟೆನೋವು ಮುಂತಾದ ದೈಹಿಕ ತೊಂದರೆಗಳು ನಿವಾರಣೆಯಾಗುತ್ತವೆ. ಮನಸ್ಸು ಚುರುಕಾಗುತ್ತದೆ, ಆಲಸ್ಯ-ಸೋಮಾರಿತನ ದೂರಾಗುತ್ತದೆ ಎಂದು ಅವರು ಹೇಳಿದರು.
“ಕಾಯಕವೇ ಕೈಲಾಸ, ಜೀವಿಸಿದರೆ ಅರ್ಥವಿರಬೇಕು, ಹುಟ್ಟಿದ್ದಕ್ಕೆ ಅರ್ಥವಿರಬೇಕು, ಮರಣಕ್ಕೂ ಅರ್ಥವಿರಬೇಕು,” ಎಂಬ ಅರ್ಥಪೂರ್ಣ ಸಂದೇಶದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC