ತುಮಕೂರು: ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಮಾರ್ಚ್ 11 ರಿಂದ 21ರವರೆಗೆ ನಡೆಯಲಿರುವ ಶ್ರೀ ದಂಡಿನಮಾರಮ್ಮ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸೇರುವ ಅಂಗಡಿಗಳ ಮೇಲೆ ನೆಲವಳಿ ಸುಂಕ ವಸೂಲಿ ಮಾಡುವ ಹಕ್ಕಿನ ಹರಾಜನ್ನು ಫೆಬ್ರವರಿ 24ರಂದು ಬೆಳಿಗ್ಗೆ 11 ಗಂಟೆಗೆ ಮಧುಗಿರಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ನಡೆಸಲಾಗುವುದು.
ಹರಾಜಿನಲ್ಲಿ ಭಾಗವಹಿಸಲಿಚ್ಛಿಸುವ ಪ್ರತಿ ಸವಾಲುದಾರರು ಸವಾಲು ಮಾಡುವ ಮುನ್ನ ತಾವಾಗಲೀ ಅಥವಾ ತಮ್ಮ ಏಜೆಂಟರ ಮೂಲಕವಾಗಲೀ 50,000 ರೂ.ಗಳ ಠೇವಣಿ ಇಡಬೇಕು. ಆಸಕ್ತರು ಹರಾಜು ಷರತ್ತು ಹಾಗೂ ಹೆಚ್ಚಿನ ವಿವರವನ್ನು ಮಧುಗಿರಿ ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4