ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕು ಹುಲಿಯೂರುದುರ್ಗ ಹೋಬಳಿ ಹಳೇವೂರು ಗ್ರಾಮದ ಶ್ರೀ ಹುಲಿಯೂರಮ್ಮ ದೇವಾಲಯದ ಜಾತ್ರಾ ಮಹೋತ್ಸವವು ಮಾರ್ಚ್ 16 ರಿಂದ 21ರವರೆಗೆ ಜರುಗಲಿದ್ದು, ಜಾತ್ರೆಯ ಅಂಗವಾಗಿ ಮಾರ್ಚ್ 18ರಂದು ರಥೋತ್ಸವ ನಡೆಯಲಿದೆ.
ಮಾರ್ಚ್ 16 ರಂದು ಬೆಳಿಗ್ಗೆ ಹೊನ್ನಾರು, ರಾತ್ರಿ ಅರಮನೆ ಆರತಿ; ಮಾರ್ಚ್ 17ರಂದು ಬೆಳಿಗ್ಗೆ ಅಗ್ನಿಕೊಂಡದ ಸೌದೆ ಬರುವಿಕೆ, ಮಧ್ಯಾಹ್ನ ಕುರ್ಜಿನ ಉತ್ಸವ, ರಾತ್ರಿ ಆರತಿ ಅರವಂಟಿಕೆ, ಘಟೆ ಉತ್ಸವ, ಸೂರ್ಯ ಮಂಡಲೋತ್ಸವ, ಹುಯಿಲ್ ಬಂಡಿ ಉತ್ಸವ, ಅಗ್ನಿಕೊಂಡಕ್ಕೆ ದೇವರು ಬರುವಿಕೆ; ಮಾರ್ಚ್ 18ರಂದು ಬೆಳಗಿನ ಜಾವ 5 ಗಂಟೆಗೆ ಅಗ್ನಿ ಕೊಂಡೋತ್ಸವ, ಸಾಯಂಕಾಲ ತೇರಿನ ಅಲಂಕಾರ ಪೂಜೆ, ರಥಕ್ಕೆ ಬಟ್ಟೆಗಳ ಕೊಡುಗೆ, ರಥೋತ್ಸವ, ಅರವಂಟಿಗೆ, ರಾತ್ರಿ ಪಲ್ಲಕ್ಕಿ ಉತ್ಸವ; ಮಾರ್ಚ್ 19ರಂದು ರಾತ್ರಿ ಕುದುರೆ ವಾಹನೋತ್ಸವ; ಮಾರ್ಚ್ 20ರಂದು ರಾತ್ರಿ ಹುಲಿ ವಾಹನೋತ್ಸವ, ಹೂವಿನ ಪಲ್ಲಕ್ಕಿ ಉತ್ಸವ; ಮಾರ್ಚ್ 21ರಂದು ಮಧ್ಯಾಹ್ನ ಉಯ್ಯಾಲೋತ್ಸವ, ಸಾಯಂಕಾಲ ತೆಪ್ಪೋತ್ಸವ, ಅರವಂಟಿಕೆ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ಜಾತ್ರಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಸ್.ಮಂಜೇಶ್ ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4