ಸರಗೂರು: ಸಾರ್ವಜನಿಕರು ಮತ್ತು ಭಕ್ತಾದಿಗಳಿಗೆ ಕಾಡು ಪ್ರಾಣಿಗಳಿಂದ ತೊಂದರೆಯಾಗದಂತೆ ನೋಡಿಕೊಳ್ಳಲು ತಾಲೂಕು ಮಟ್ಟದ ಅಧಿಕಾರಿಗಳಿಗೆ ಹುಣಸೂರು ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಸೂಚನೆ ನೀಡಿದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇರುವ ಶ್ರೀ ಕ್ಷೇತ್ರ ಬೇಲದಕುಪ್ಪೆ ಮಹದೇಶ್ವರ ಪ್ರಮುಖ ದೇವಸ್ಥಾನದ ಜಾತ್ರೆಗೆ ಒಂದು ತಿಂಗಳ ಮುಂಚಿತವಾಗಿ ಜಿಲ್ಲಾಧಿಕಾರಿಗಳು ನೀಡಿದ ಆದೇಶದ ಮೇರೆಗೆ ಹುಣಸೂರು ಉಪವಿಭಾಗಾಧಿಕಾರಿ ಎಚ್. ಬಿ. ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಮ್ಮುಖದಲ್ಲಿ ದೇವಸ್ಥಾನ ಪರಿಶೀಲನೆ ನಡೆಸಿ ನಂತರ ಹೆಡಿಯಾಲ ಉಪವಲಯ ಕಚೇರಿಯ ಸಭಾಂಗಣದಲ್ಲಿ ಗುರುವಾರ ಅಧಿಕಾರಿ ಸಭೆ ನಡೆಸಲಾಯಿತು .
ನಂತರ ಮಾತನಾಡಿದ ಅವರು, ಕಂದಾಯ ಮತ್ತು ಆರೋಗ್ಯ ಮತ್ತು ನೀರು ನೈರ್ಮಲ್ಯ, ಅರಣ್ಯ, ಪೋಲೀಸ್ ಇಲಾಖೆ ಅಧಿಕಾರಿಗಳಿಗೆ ದೇವಸ್ಥಾನಕ್ಕೆ ಬರುವ ಭಕ್ತರಿಗಳಿಗೆ ಹಾಗೂ ಸಾರ್ವಜನಿಕರು ತೊಂದರೆ ಆಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು . ಕಳೆದ ವರ್ಷ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಅದೇ ತರಹದ ಧಾರ್ಮಿಕ ಪೂಜೆ ಗಳಿಗೆ ತೊಂದರೆ ನೀಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಲದಕುಪ್ಪೆ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನವು ಹಿಂದೂ ಕ್ಯಾಲೆಂಡರ್ ನ ಕೊನೆಯ ಸೋಮವಾರದೊಂದಿಗೆ ಕಾರ್ತಿಕ ಮಾಸದ ಸಂದರ್ಭದಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತದೆ. ಯಾವ ಯಾವ ಕಡೆಯಿಂದ ದೇವಸ್ಥಾನಕ್ಕೆ ಜನರು ಬರುತ್ತಾರೆ. ಬಸ್ ವ್ಯವಸ್ಥೆ ಕಲ್ಪಿಸಬೇಕು. ಜೇನ್ ಗೇಟ್ ಮುಂಭಾಗದಲ್ಲಿ ಅಂಗಡಿ ಮುಂಗಟ್ಟುಗಳಿಗೆ ಹಾಗೂ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ರಸ್ತೆಗಳ ಬದಿಯಲ್ಲಿ ಗಿಡಗಂಟಿಗಳು ಬೆಳೆದುಕೊಂಡಿರುವ ಹಾಗೂ ರಸ್ತೆಯಲ್ಲಿ ಗುಂಡಿಗಳಿಗೆ ಮಣ್ಣು ಮುಚ್ಚಬೇಕು ಎಂದು ಸೂಚನೆ ನೀಡಿದರು.
ಮೂರು ದಿನ ಕಾಲ ಜಾತ್ರಾ ನಡೆಯುವ ಕಾರಣ ರಸ್ತೆಯಲ್ಲಿ ಧೂಳು ಬರುತ್ತದೆ. ಧೂಳು ಹರಡದಂತೆ ನೀರು ಹಾಕಬೇಕು. ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡಲು ಟ್ಯಾಂಕ್ ನ್ನು ನಿರ್ಮಾಣ ಮಾಡಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಬೇಕು. ಏಕೆಂದರೆ ಯಾವುದೇ ಈತ ಘಟನೆ ನಡೆದಿದೆ ನೋಡಿಕೊಳ್ಳಬೇಕು. ಕಂದಾಯ ಇಲಾಖೆ ತಹಶೀಲ್ದಾರ್ ರುಕಿಯಾ ಬೇಗಂ ಜಾತ್ರಾ ಮಹೋತ್ಸವದ ರೂಪುರೇಷೆ ನೋಡಿಕೊಳ್ಳ ಬೇಕು ಎಂದು ತಿಳಿಸಿದರು.
ಮುಜರಾಯಿ ಧಾರ್ಮಿಕ ದತ್ತಿ ಇಲಾಖೆ ಇಓ ರಘು ರವರು ಈ ಭಾಗದ ಟ್ರಸ್ಟ್ ಸಮಿತಿ ಹಾಗೂ ಎಲ್ಲಾ ಗ್ರಾಮಗಳ ಮುಖಂಡರು ಹಾಗೂ ಯಜಮಾನರು ಮುಂದಿನ ಬುಧವಾರ ದಂದು ಸಭೆಯನ್ನು ನಡೆಸಿ. ಎಲ್ಲಾ ಮುಖಂಡರನ್ನು ವಿಶ್ವಾಸ ತೆಗೆದುಕೊಂಡು ಸಭೆ ಮಾಡಬೇಕೆಂದು ಸೂಚನೆ ನೀಡಿದರು.
ಮುಖಂಡರು ಒತ್ತಾಯ:
ದೇವಸ್ಥಾನದಲ್ಲಿ ದೇವರಿಗೆ ಪೂಜೆ ಪುನಸ್ಕಾರ ಮಾಡಲು ಅನುಮತಿ ಇಲ್ಲದೆ, ದೇವರು ಅನಾಥ ವಾಗಿದೆ. ಜಾತ್ರಾ ಮಾಡುವ ಸಂದರ್ಭದಲ್ಲಿ ಟ್ರಸ್ಟ್ ಸಮಿತಿಯಿಂದ ದೇವಸ್ಥಾನಕ್ಕೆ ಸುಣ್ಣ ಬಣ್ಣ ಬಳಿದು ಹಾಗೂ ಗಿಡಗಂಟಿಗಳ ಕಡಿದು ಸ್ವಚ್ಚತೆ ಮಾಡಿಕೊಂಡು ಬರುವ ಭಕ್ತರಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದೆವು. ಆದರೆ ಮುಜರಾಯಿ ಇಲಾಖೆಗೆ ಸೇರಿದ ಮೇಲೆ ಯಾವುದೇ ನಡೆಯುತ್ತಿಲ್ಲ. ಈ ಬಾರಿ ಜಾತ್ರಾ ಮಹೋತ್ಸವ ನಡೆಯುವ ಸಂದರ್ಭದಲ್ಲಿ ಮಂಗಳವಾದ್ಯ. ವಿದ್ಯುತ್ ಹಾಗೂ ನಾಕೈದು ಊರುಗಳಿಂದ ತೇರು ಬರುತ್ತಿದ್ದವು ಅವನನ್ನು ಒಳಗಡೆ ಬಿಡಲು ಅವಕಾಶ ನೀಡಬೇಕೆಂದು ತಿಳಿಸಿದರು.
ಹಾಗೂ ಕಳೆದ ಒಂದು ತಿಂಗಳ ಹಿಂದೆ ದೇವಸ್ಥಾನದಲ್ಲಿ ನಿರಂತರವಾಗಿ ಪೂಜೆ ಮಾಡಿಕೊಂಡು ಬರುತ್ತಿರುವ ಪೂಜಾರಿಗೆ ನಮ್ಮ ಟ್ರಸ್ಟ್ ವತಿಯಿಂದ ಒಂದು ಕೊಠಡಿಯನ್ನು ಮಾಡಿಕೊಟ್ಟಿದ್ದೆವು. ಅದರೆ ಮುಜರಾಯಿ ಇಲಾಖೆ ಸೇರಿದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದೇವಸ್ಥಾನಕ್ಕೆ ಪೂಜೆ ಮಾಡಲು ಅವಕಾಶವನ್ನು ನೀಡದೇ ಪೂಜಾರಿಯನ್ನು ಕಳಿಸಿ ಬಿಟ್ಟಿದ್ದಾರೆ ಅದರಿಂದ ತಾವುಗಳು ಅನುಮತಿ ನೀಡಬೇಕು ಎಂದು ಈ ಭಾಗದ ಸಾರ್ವಜನಿಕರು ಹಾಗೂ ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸರಗೂರು ತಾಲೂಕು ತಹಶೀಲ್ದಾರ್ ರುಕಿಯಾ ಬೇಗಂ, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಧರನೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್, ಎ ಸಿ ಎಫ್ ಸತೀಶ್, ಧಾರ್ಮಿಕ ದತ್ತಿ ಇಲಾಖೆ ಇಓ ರಘು, ರಾಕೇಶ್ ,ಆರ್ ಎಫ್ ಓ ವಿವೇಕ್, ಅಮೃತ, ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಗೋವಿಂದ ನಾಯ್ಕ, ಕೆಇಬಿ ಎಇಇ ದೀಪಿಕ್, ಪಿಡಿಒಗಳು ಚಿನ್ನಸ್ವಾಮಿ, ಪರಮೇಶ್, ಕಂದಾಯ ಇಲಾಖೆ ಸಿಬ್ಬಂದಿಗಳು ರವಿಂದ್ರ, ಮುಜೀಬ್, ಶ್ರೀನಿವಾಸ, ಗ್ರಾಪಂ ಸದಸ್ಯರು ಗಂಗಾಧರ್, ಶಿವಕುಮಾರ್,ಮುಖಂಡರು ನಾಗೇಂದ್ರ, ಇನ್ನೂ ಮುಖಂಡರು ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q