ಪಾವಗಡ: ತಾಲ್ಲೂಕು ವೀರಮ್ಮನಹಳ್ಳಿ ತಾಂಡ ಗ್ರಾಮದಲ್ಲಿ ಶ್ರೀಮರಿಯಮ್ಮ ದೇವಿ ಮತ್ತು ಶ್ರೀ ಸೇವಾಲಾಲ್ ಮಹಾರಾಜ್ ನೂತನ ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವ ಕಾರ್ಯಕ್ರಮ ಏಪ್ರಿಲ್ 16ರಂದು ನಡೆಯಲಿದೆ.
ಬೆಳಗ್ಗೆ ಗಣಪತಿ ಪ್ರಾರ್ಥನೆ, ಗಂಗಾಪೂಜೆ, ಗೋಪೂಜೆ, ಮತ್ತು ಮೃತ್ಸಂಗ್ರಹಣ, ದೇವಾಲಯ ಪ್ರವೇಶ, ಗಣಪತಿ ಪೂಜೆ, ಸ್ವಸ್ತಿವಾಚನ, ದೇವನಾಂದಿ, ಪಂಚಗವ್ಯ, ರಕ್ಷಾಬಂಧನ, ಸರ್ವತೋಭದ್ರ ಮಂಡಲ ಆವಾಹನೆ, ಕಳಶ ಸ್ಥಾಪನೆ, ನವಗ್ರಹ ಮಂಡಲ ಆವಾಹನೆ, ಜಲಕ್ಷೀರಾಧಿವಾಸ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಸಾಯಂಕಾಲ ಕಳಶಗಳಿಗೆ ಅರ್ಚನೆ, ಅಂಕುರಾರ್ಪಣೆ, ವಾಸ್ತು ಮಂಡಲ ಆರಾಧನೆ, ಆಲಯ ದಿಗ್ವಂದನ, ರಕ್ಷೆಘ್ನ ಹೋಮ, ಸಾಯಂದೀಕ್ಷಾ ಹೋಮ, ಕೂಷ್ಮಾಂಡ ಹೋಮ, ಗಣಪತಿ ಹೋಮ, ವಾಸ್ತು ಹೋಮ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಏ.17ರಂದು ಬೆಳಗ್ಗೆ: ಕಳಶಗಳಿಗೆ ಅರ್ಚನೆ, ಸ್ನಪನ, ದೀಕ್ಷಾಹೋಮ, ನವಗ್ರಹೋಮ, ದುರ್ಗಾಹೋಮ, ಮೃತ್ಯುಂಜಯ ಹೋಮ, ನಕ್ಷತ್ರ ಹೋಮ, ಧಾನ್ಯಾಧಿವಾಸ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಸಾಯಂಕಾಲ ಕಳಶಗಳಿಗೆ ಅರ್ಚನೆ, ಸಾಯಂದೀಕ್ಷಾ ಹೋಮ, ಪುಷ್ಪಶಯ್ಯಾದಿವಾಸ, ನ್ಯಾಸಗಳು, ಪಿಂಡಿಕಾ ಸ್ಥಾಪನೆ, ದೀಪಾರಾಧನೆ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ಏ.18ರಂದು ಬೆಳಗ್ಗೆ 6:30 ಗಂಟೆಗೆ ಶುಭ ಮುಹೂರ್ತದಲ್ಲಿ ದೇವರುಗಳಿಗೆ ಪ್ರಾಣಪ್ರತಿಷ್ಠೆ, ನೇತ್ರೋನ್ನಿಲನ, ಧೇನುದರ್ಶನ, ಜ್ವಾಲಾದರ್ಶನ, ದರ್ಪಣ ವೀಕ್ಷಣ, ಕೂಶ್ಚಾಂಡಸ್ಪೋಟನ, ದೀಕ್ಷಾಹೋಮ, ನ್ಯಾಸಹೋಮಗಳು, ಮುರ್ತ್ಯಾಂಗ ಹೋಮಗಳು, ಮಹಾಬಲಿ, ಮಹಾಪೂರ್ಣಾಹುತಿ, ಪ್ರತಿಷ್ಠಿತ ದೇವರುಗಳಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ಅರ್ಚನೆ, ಮಹಾಮಂಗಳಾರತಿ, ಕಲಶೋದ್ವಾಸನೆ, ಮಾರ್ಜನೆ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಆಯೋಜನೆಯನ್ನು ಮಾಡಲಾಗಿದ್ದು ಎಲ್ಲಾ ಪೂಜಾ ಕಾರ್ಯಕ್ರಮಗಳಿಗೆ ಸದ್ಭಕ್ತರೆಲ್ಲರೂ ಸಕಾಲಕ್ಕೆ ಆಗಮಿಸಿ ತನು, ಮನ, ಧನ ಧಾನ್ಯಗಳನ್ನು ಅರ್ಪಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ವೀರಮ್ಮನಹಳ್ಳಿ ತಾಂಡ ಶ್ರೀ ಮರಿಯಮ್ಮ ದೇವಿ ಮತ್ತು ಸೇವಾಲಾಲ್ ಸೇವಾ ಸಮಿತಿ ಮತ್ತು ಗ್ರಾಮಸ್ಥರು, ವಿನಂತಿಯನ್ನು ಮಾಡಿಕೊಂಡರು.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW