ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲ್ಲೂಕು ಯರೇಕುಪ್ಪಿ ಗ್ರಾಮದಲ್ಲಿ ಅಯೋಧ್ಯೆಯ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯವಾಗಿ ಯರೇಕುಪ್ಪಿ ಗ್ರಾಮದಲ್ಲಿ ಬೆಳಿಗ್ಗೆ ಶ್ರೀ ಆಂಜನೇಯ ಸ್ವಾಮಿಗೆ ಅಭಿಷೇಕ ಕಾರ್ಯಕ್ರಮ ನೆರವೇರಿತ್ತು.
ನಂತರ ಶ್ರೀ ಪ್ರಭು ಶ್ರೀರಾಮಚಂದ್ರನ ಭಾವಚಿತ್ರ ಮೆರವಣಿಗೆ ನಡೆಸಲಾಯಿತು . ಮೆರವಣಿಗೆಯಲ್ಲಿ ಶ್ರೀ ದುರ್ಗಾದೇವಿ ಹಲಗಿ ಮೇಳ, ಶ್ರೀ ವೀರಭದ್ರೇಶ್ವರ ಸಮಾಳ, ಶ್ರೀ ಮಾರುತಿ ಹವ್ಯಾಸಿ ಭಜನಾ ಸಂಘ, ಶ್ರೀ ಮಾರುತಿ ಸೌಂಡ್ಸ್ , ಮತ್ತು ಎಲ್ಲಾ ಶ್ರೀರಾಮ ಭಕ್ತರು ಪಾಲ್ಗೊಂಡಿದ್ದರು.
ಮಧ್ಯಾಹ್ನ ಶ್ರೀ ಪ್ರಭು ಶ್ರೀರಾಮಚಂದ್ರನ ಪ್ರಸಾದ ನಡೆಯಿತು . ಸಾಯಂಕಾಲ ದೀಪೋತ್ಸವ ಹಾಗೂ ಶ್ರೀ ಕಡಕೇರಮ್ಮ ದೇವಿ ಕೋಲಾಟ ಮೇಳ ಹಾಗೂ ಶಾಲಾ ಮಕ್ಕಳ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಯರೇಕುಪ್ಪಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಹಳ್ಳಿಯ ಗ್ರಾಮಸ್ಥರು ಪಾಲ್ಗೊಂಡು ಜೈ ಶ್ರೀ ರಾಮ್ ಎಂದು ಘೋಷಣೆ ಮೊಳಗಿಸಿದ್ದರು.
ವರದಿ: ಮಂಜು ಶ್ರವಣೂರು.