ಕೊಲೊಂಬೋ: ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ರಾಜೀನಾಮೆಗೆ ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು ಅವರ ನಿವಾಸಕ್ಕೆ ನುಗ್ಗಿದ ಬೆನ್ನಲ್ಲೇ ಈಗ ಅವರು ತಮ್ಮ ಅಧಿಕೃತ ನಿವಾಸದಿಂದ ಪರಾರಿಯಾಗಿದ್ದಾರೆ.
ಗೋತಬಯ ರಾಜಪಕ್ಸೆ ಈಗಾಗಲೇ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಘೋಷಿಸುವುದಾಗಿ ಹೇಳಿರುವ ಬೆನ್ನಲ್ಲೇ ಶ್ರೀಲಂಕಾ ನೌಕಾಪಡೆಯ ಹಡಗಿನಲ್ಲಿ ಸೂಟ್‌ಕೇಸ್‌ಗಳನ್ನು ಲೋಡ್ ಮಾಡುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ,ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಈ ಸೂಟ್ ಕೇಸ್ ಗಳೆಲ್ಲವೂ ಕೂಡ ಅಧ್ಯಕ್ಷ ರಾಜಪಕ್ಸೆ ಅವರಿಗೆ ಸೇರಿದ್ದು ಎನ್ನಲಾಗಿದೆ.
ವೈರಲ್ ಆಗಿರುವ ವಿಡಿಯೋಗಳಲ್ಲಿ ಎಸ್‌ಎಲ್‌ಎನ್‌ಎಸ್ ಗಜಬಾಹು ಹಡಗಿನಲ್ಲಿ ಮೂವರು ವ್ಯಕ್ತಿಗಳು ಬೃಹದಾಕಾರದ ಸೂಟ್‌ಕೇಸ್‌ಗಳನ್ನು ಹೊತ್ತೊಯ್ಯುತ್ತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದಾಗಿದೆ.ಈ ಮೂವರು ವ್ಯಕ್ತಿಗಳು ಅವಸರದಲ್ಲಿ ಸೂಟ್ ಕೇಸ್ ಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ನ್ಯೂಸ್ 1 ಚಾನೆಲ್ ವರದಿ ಮಾಡಿದೆ. ಅಷ್ಟೇ ಅಲ್ಲದೆ ಈ ಹಡಗುಗಳನ್ನು ಹತ್ತಿದವರ ಬಗ್ಗೆ ವಿವರ ನೀಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ ಎಂದು ಈ ಚಾನೆಲ್ ವರದಿ ಮಾಡಿದೆ.
ಕಳೆದ ರಾತ್ರಿ ಅಧ್ಯಕ್ಷ ರಾಜಪಕ್ಷೆ ಅವರನ್ನು ಸೇನಾ ಪ್ರಧಾನ ಕಛೇರಿಗೆ ಸ್ಥಳಾಂತರಿಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲವೊಂದು ತಿಳಿಸಿದೆ.ಇಂದು ಶ್ರೀಲಂಕಾದ ಪ್ರಮುಖ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧ್ಯಕ್ಷರಿಗೆ ಸೇರಿದ ವಾಹನದ ಬೆಂಗಾವಲು ಪಡೆ ಹಾಜರಾಗಿತ್ತು, ಆದರೆ ಅವರು ಶ್ರೀಲಂಕಾ ದೇಶವನ್ನು ತೊರೆದಿದ್ದಾರೆಯೇ ಎನ್ನುವುದರ ಬಗ್ಗೆ ಯಾವುದೇ ಖಚಿತತೆ ಇಲ್ಲ ಎನ್ನಲಾಗಿದೆ.
ಸದ್ಯ ರಾಜಪಕ್ಸೆ ಪ್ರಸ್ತುತ ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ ಮತ್ತು ಆದರೆ ಪ್ರತಿಭಟನಾಕಾರರು ಮಾತ್ರ ಈಗ ಅವರ ಕಚೇರಿ ಮತ್ತು ಅಧಿಕೃತ ನಿವಾಸ ಎರಡನ್ನೂ ಆಕ್ರಮಿಸಿಕೊಂಡಿದ್ದಾರೆ.
ಶ್ರೀಲಂಕಾ ದೇಶವು ಇದೆ ಮೊದಲ ಬಾರಿಗೆ ತೀವ್ರ ಆರ್ಥಿಕ ಕುಸಿತವನ್ನು ಕಂಡಿದ್ದು, ಆರ್ಥಿಕ ಸಹಾಯಕ್ಕಾಗಿ ಈಗ ಅದು ಭಾರತ,ಚೀನಾ ಹಾಗೂ ವಿಶ್ವಬ್ಯಾಂಕ್ ಗಳಿಗೆ ಆರ್ಥಿಕ ನೆರವಿಗಾಗಿ ಮನವಿ ಮಾಡಿದೆ.ಈಗ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಆಮದಿನ ಪಾವತಿಗಾಗಿ ಹೆಣಗಾಡುತ್ತಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz