ಬೆಂಗಳೂರು: ಬಾಲಕಿಯನ್ನು ಚುಡಾಯಿಸಿದ್ದಕ್ಕೆ ಇಬ್ಬರು SSLC ವಿದ್ಯಾರ್ಥಿಗಳಿಗೆ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗಂಗೊಂಡನಹಳ್ಳಿಯಲ್ಲಿ ನಡೆದಿದೆ.
ಮಾರ್ಚ್ 17 ರಂದು ಗಂಗೊಂಡನಹಳ್ಳಿಯ 1 ನೇ ಕ್ರಾಸ್ನಲ್ಲಿ ರಾತ್ರಿ 8:30 ರಿಂದ 9 ಗಂಟೆಯ ನಡುವೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಥಳಿತಕ್ಕೊಳಗಾದ ಬಾಲಕರು ಇದೀಗ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬೆನ್ನಲ್ಲೇ ಬಾಲಕನೊಬ್ಬನ ತಂದೆ ಎ.ಶಬ್ಬೀರ್ ಎಂಬುವವದು, ಸುಫಿಯಾನ್, ಜುಬೈರ್ ಮತ್ತು ಇತರ ಮೂವರ ವಿರುದ್ಧ ಚಂದ್ರಾ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ.
ಬಾಲಕಿಯನ್ನು ಚುಡಾಯಿಸಿದ ಹಿನ್ನೆಲೆಯಲ್ಲಿ ಐವರು ಪುರುಷರಿದ್ದ ಗುಂಪು ಬಾಲಕರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಥಳಿಸಿ, ವಿಡಿಯೋ ಸೆರೆ ಹಿಡಿದಿದ್ದರು ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4