ಪಾವಗಡ: ತಾಲ್ಲೂಕಿನ ಅರಸೀಕೆರೆಯ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಹೃತಿಕ್ ಎಚ್. ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ದಕ್ಷಿಣ ಭಾರತ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ಧಾರವಾಡದ ಡಯಟ್ (DIET) ವತಿಯಿಂದ ರಾಯಾಪುರದ ಜ್ಞಾನ ವಿಕಾಸ ತರಬೇತಿ ಸಂಸ್ಥೆಯಲ್ಲಿ ನಡೆದ ವೈಯಕ್ತಿಕ ವಿಭಾಗದ ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯಲ್ಲಿ ಹೃತಿಕ್ ಪಾಲ್ಗೊಂಡಿದ್ದನು. ಈತ ಪ್ರದರ್ಶಿಸಿದ ‘ಶಾಲೆ ಮತ್ತು ಆಸ್ಪತ್ರೆ ಸೂಚನಾ ವ್ಯವಸ್ಥೆ’ ಹಾಗೂ ‘ಅಗ್ನಿನಂದಕ’ (Fire Extinguisher) ಮಾದರಿಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ವಿಜೇತನಾಗಿ ಹೊರಹೊಮ್ಮಿದ್ದಾನೆ.
ಮುಂದಿನ ಹಂತ: ರಾಜ್ಯ ಮಟ್ಟದಲ್ಲಿ ಜಯಗಳಿಸಿರುವ ಹೃತಿಕ್, ಇನ್ನುಳಿದ ವಿಜೇತರೊಂದಿಗೆ ಜನೆವರಿ 19 ರಿಂದ 23 ರವರೆಗೆ ತೆಲಂಗಾಣದ ಹೈದರಾಬಾದ್ ನಲ್ಲಿ ನಡೆಯಲಿರುವ ದಕ್ಷಿಣ ಭಾರತ ವಿಭಾಗೀಯ ಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾನೆ.
ಹೃತಿಕನ ಈ ಸಾಧನೆಗೆ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ರೇಣುಕ ರಾಜ್ ಜಿ.ಹೆಚ್., ಎಸ್‌ಡಿಎಂಸಿ ಅಧ್ಯಕ್ಷ ಪ್ರೇಮ್ ಕುಮಾರ್, ಉಪಾಧ್ಯಕ್ಷೆ ಕವಿತಮ್ಮ ಹಾಗೂ ಶಿಕ್ಷಕ ವೃಂದದವರಾದ ಹನುಮೇಶ್, ಎನ್. ಮೋಹನ್ ಕುಮಾರ್, ಜಿ.ಕೆ. ಕುಮಾರ್ ಸೇರಿದಂತೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


