ತುಮಕೂರು: ಪಂಪ್ ಹೌಸ್ ನಲ್ಲಿ ಅಡಗಿದ್ದ ಚಿರತೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ರೈತರೊಬ್ಬರು ಪಾರಾಗಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಕ್ಯಾಮಸಂದ್ರ ಗ್ರಾಮದಲ್ಲಿ ನಡೆದಿದೆ.
ಜಯರಾಮ್ ಪ್ರಾಣಾಪಾದಿಂದ ಪಾರಾದ ರೈತರಾಗಿದ್ದಾರೆ. ಎಂದಿನಂತೆ ನಿನ್ನೆ ರಾತ್ರಿ ತಮ್ಮ ತೋಟದ ಪಂಪ್ ಹೌಸ್ ಒಳಗೆ ತೆರಳಿದ್ದಾರೆ. ಪಂಪ್ ಹೌಸ್ ನಲ್ಲಿ ಅಡಗಿಕೊಂಡಿದ್ದ ಚಿರತೆ, ಜಯರಾಮ್ ಅವರಿಗೆ ಗೋಚರಿಸಿಲ್ಲ. ಒಂದು ಹಂತದಲ್ಲಿ ಕತ್ತಲೆಯಲ್ಲಿ ಚಿರತೆ ಕಾಲು ಮುಟ್ಟಿದ್ದಾರೆ, ತಕ್ಷಣ ಎಚ್ಚೆತ್ತುಕೊಂಡ ಜಯರಾಮ್ ಅವರು ಕ್ಷಣಾರ್ಧದಲ್ಲಿ ಪಂಪ್ ಹೌಸ್ ನಿಂದ ಹೊರಗೆ ಓಡಿ ಬಂದಿದ್ದಾರೆ. ಇದರಿಂದಾಗಿ ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದಂತಾಗಿದೆ.
ಸ್ವಲ್ಪ ಯಾಮಾರಿದ್ದರೂ ಚಿರತೆ ದಾಳಿಗೆ ಒಳಗಾಗುತ್ತಿದ್ದರು. ಅಲ್ಲದೆ ಚಿರತೆ ಎಂದು ಸ್ಪಷ್ಟವಾಗುತ್ತಿದ್ದಂತೆ ಕೂಡಲೇ ಪಂಪ್ ಹೌಸ್ ಬಾಗಿಲು ಹಾಕಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಪಂಪ್ ಹೌಸ್ ಸುತ್ತ ಬಲೆ ಹಾಕಿ ಚಿರತೆ ಸೆರೆ ಹಿಡಿದಿದ್ದಾರೆ. ಈ ಮೂಲಕ ಗ್ರಾಮಸ್ಥರು ಚಿರತೆ ಕಾಟದಿಂದ ನಿಟ್ಟುಸಿರು ಬಿಡುವಂತಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


