ತುರುವೇಕೆರೆ: ಕರ್ನಾಟಕ ಪ್ರದೇಶ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ ತುರುವೇಕೆರೆ ಘಟಕದ ವತಿಯಿಂದ ರಾಷ್ಟ್ರೀಯ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಹಾಗೂ ಫಲಾನುಭವಿಗಳ ಸಭೆಯನ್ನು ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಕೆಪಿಸಿಸಿ ಬೀದಿ ಬದಿ ವ್ಯಾಪಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ಶಂಕರಪ್ಪ ಕಾರ್ಯಕ್ರಮ ಉದ್ಘಾಟಿಸಿ, ಸದಸ್ಯರುಗಳಿಗೆ ಸಾರ್ವಜನಿಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವಂತೆ ಮನವಿ ಮಾಡಿದರು. ಹಲವು ಗಣ್ಯರನ್ನು ತಾಲೂಕು ಘಟಕದ ವತಿಯಿಂದ ಗೌರವಿಸಲಾಯಿತು. ತಾಲೂಕು ಘಟಕದ ಅಧ್ಯಕ್ಷ ಎಚ್. ಎಂ. ನವೀನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಅಭಿವೃದ್ಧಿಗೆ ಕೈ ಜೋಡಿಸದ ಸ್ವಾರ್ಥಿಗಳನ್ನು ವಜಾಗೊಳಿಸಿ: ಜಿಲ್ಲಾ ಉಪಾಧ್ಯಕ್ಷ ರಂಗನಾಥ್ ಮಾತನಾಡಿ, ನಮ್ಮ ಸಂಘದ ಕೆಲವು ಸದಸ್ಯರು ಕೇವಲ ಗುರುತಿನ ಚೀಟಿ ಪಡೆದು ತಮ್ಮ ಅನುಕೂಲಕ್ಕೆ ಬಳಸುತ್ತಿದ್ದಾರೆ. ಸಂಘದ ಅಭಿವೃದ್ಧಿಗೆ ಕೈಜೋಡಿಸದ ಅಂತಹ ಸದಸ್ಯರುಗಳನ್ನು ವಜಾ ಮಾಡಬೇಕು. ಸಂಘದ ಬೆಳವಣಿಗೆಗೆ ನೂತನ ಸದಸ್ಯರನ್ನು ನೋಂದಾಯಿಸಿಕೊಳ್ಳಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಸಂಜು, ತಿಪಟೂರು ತಾ. ಅಧ್ಯಕ್ಷ ಸತೀಶ್, ಚಿ.ನಾ.ಹಳ್ಳಿ ಅಧ್ಯಕ್ಷ ಮಂಜುನಾಥ್, ತಾ. ಮಹಿಳಾ ಅಧ್ಯಕ್ಷೆ ಸಾಲರಹಳ್ಳಿ ರೇಣುಕಮ್ಮ, ಉಪಾಧ್ಯಕ್ಷರಾಗಿ ಅಶೋಕ್, ಮರಿಯಣ್ಣ, ವಿವಿಧ ಪದಾಧಿಕಾರಿಗಳಾದ ನಟರಾಜು, ಅಭಿಷೇಕ್, ರಮೇಶ್, ಎಸ್.ಎಸ್. ಮಧು, ನವೀನ್ ಕುಮಾರ್, ರವೀಶ್, ತ್ಯಾಗರಾಜು ಸೇರಿದಂತೆ ಬೀದಿಬದಿ ವ್ಯಾಪಾರಿಗಳು ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
“ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಮಾಡಬೇಕು. ನಾವು ಬೆಳಿಗ್ಗೆಯಿಂದ ಸಂಜೆಯವರೆಗೆ ಮಾತ್ರ ವ್ಯಾಪಾರ ಮಾಡಲಿಕ್ಕೆ ತಾತ್ಕಾಲಿಕವಾಗಿ ಸ್ಥಳ ಬಳಸಬಹುದಾಗಿದೆಯಷ್ಟೆ. ಬದಲಾಗಿ ಇದು ನಮ್ಮ ಸ್ಥಳ ಎಂಬ ಭಾವನೆ ಬಿಟ್ಟು ನಾಗರಿಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು.”
– ಶಂಕರಪ್ಪ, ಜಿಲ್ಲಾ ಅಧ್ಯಕ್ಷರು, ಕೆಪಿಸಿಸಿ ಬೀದಿ ಬದಿ ವ್ಯಾಪಾರಿಗಳ ಸಂಘ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


