nammatumakuru

    Subscribe to Updates

    Get the latest creative news from FooBar about art, design and business.

    What's Hot

    ಎಸ್ ಐಆರ್ ಪ್ರಕ್ರಿಯೆ ನಿರ್ಲಕ್ಷಿಸದೇ ಗಂಭೀರವಾಗಿ ಪರಿಗಣಿಸಿ: ಬಿಜೆಪಿ ಮುಖಂಡ ಸ್ಫೂರ್ತಿ ಚಿದಾನಂದ್ ಮನವಿ

    July 8, 2026

    ತುಮಕೂರು: ಜುಲೈ 10 ರಿಂದ 3 ದಿನಗಳ ಕಾಲ ‘ಬಿಲ್ಡ್ ಟೆಕ್-2026’ ಬೃಹತ್ ವಸ್ತು ಪ್ರದರ್ಶನ

    July 8, 2026

    ವಕೀಲರ ಮೇಲಿನ ಹಲ್ಲೆ ಖಂಡಿಸಿ ನ್ಯಾಯಾಲಯದ ಬಳಿ ಪ್ರತಿಭಟನೆ: ಕಲಾಪದಿಂದ ಹೊರಗುಳಿದ ವಕೀಲರು

    July 8, 2026
    Facebook Twitter Instagram
    ಟ್ರೆಂಡಿಂಗ್
    • ಎಸ್ ಐಆರ್ ಪ್ರಕ್ರಿಯೆ ನಿರ್ಲಕ್ಷಿಸದೇ ಗಂಭೀರವಾಗಿ ಪರಿಗಣಿಸಿ: ಬಿಜೆಪಿ ಮುಖಂಡ ಸ್ಫೂರ್ತಿ ಚಿದಾನಂದ್ ಮನವಿ
    • ತುಮಕೂರು: ಜುಲೈ 10 ರಿಂದ 3 ದಿನಗಳ ಕಾಲ ‘ಬಿಲ್ಡ್ ಟೆಕ್-2026’ ಬೃಹತ್ ವಸ್ತು ಪ್ರದರ್ಶನ
    • ವಕೀಲರ ಮೇಲಿನ ಹಲ್ಲೆ ಖಂಡಿಸಿ ನ್ಯಾಯಾಲಯದ ಬಳಿ ಪ್ರತಿಭಟನೆ: ಕಲಾಪದಿಂದ ಹೊರಗುಳಿದ ವಕೀಲರು
    • ಸರಗೂರು: ನಿಯಮ ಗಾಳಿಗೆ ತೂರಿ ಕೆಪಿಎಸ್ ಶಾಲೆಗೆ ರಾಜಕೀಯ ನಾಯಕರ ನೇಮಕ – ಶಾಸಕರ ವಿರುದ್ಧ ಎಸ್ ಡಿಎಂಸಿ ಆಕ್ರೋಶ, ಪ್ರತಿಭಟನೆಗೆ ನಿರ್ಧಾರ
    • ಸಂವಿಧಾನ ರಕ್ಷಣೆಗೆ ಯುವ ಪೀಳಿಗೆ ಜಾಗರೂಕರಾಗಬೇಕು: ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಕರೆ
    • ವಾಸ್ತವ ವರದಿ ಪರಿಶೀಲನೆ ಬಳಿಕವೇ ಬರ ಘೋಷಣೆ ಮತ್ತು ಪರಿಹಾರ ವಿತರಣೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
    • ಗೆಳೆಯನಿಗೆ ಕೊನೆಯ ಸಂದೇಶ ಕಳುಹಿಸಿ ಸ್ಯಾಂಕಿ ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ
    • ಗರ್ಭಕಂಠದ ಕ್ಯಾನ್ಸರ್ ತಡೆಯಬಹುದಾದ ಏಕೈಕ ಕ್ಯಾನ್ಸರ್: ಎಚ್‌ ಪಿವಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ  ಡಾ.ಜ್ಯೋತ್ಸ್ನಾ ರೆಡ್ಡಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದ ಸ್ಟೂಡೆಂಟ್ ಪಾರ್ಟಿ ವಿಡಿಯೋ ಸಾಂಗ್ ಬಿಡುಗಡೆ
    ರಾಜ್ಯ ಸುದ್ದಿ June 17, 2024

    ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದ ಸ್ಟೂಡೆಂಟ್ ಪಾರ್ಟಿ ವಿಡಿಯೋ ಸಾಂಗ್ ಬಿಡುಗಡೆ

    By adminJune 17, 2024No Comments2 Mins Read
    song

    ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದ ಸ್ಟೂಡೆಂಟ್ ಪಾರ್ಟಿ ವಿಡಿಯೋ ಹಾಡು ಬಿಡುಗಡೆ ಆಗಿದೆ. ಈ ಸಿನಿಮಾಗೆ ಅರುಣ್ ಅಮುಕ್ತ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸುವ ಮೂಲಕ ಈ ಹಾಡನ್ನು ಬಿಡುಗಡೆ ಮಾಡಲಾಯಿತು.

    ಈ ಸಿನಿಮಾದಲ್ಲಿ ಚಂದನ್​ ಶೆಟ್ಟಿ ಅಭಿನಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಭಾಗಿ ಆಗಿದ್ದರು. ಅವರ ಜೊತೆ ಅರುಣ್ ಅಮುಕ್ತ, ಚೇತನ್ ಕುಮಾರ್ ಕೂಡ ಭಾಗಿಯಾಗಿ ಸಿನಿಮಾ ಮತ್ತು ಸಾಂಗ್​ ಬಗ್ಗೆ ಮಾಹಿತಿ ನೀಡಿದರು.

    ಈ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು, ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ. ಚಂದನ್​ ಶೆಟ್ಟಿ ಜೊತೆ ಅಮರ್, ಭಾವನಾ, ವಿವಾನ್, ಮನಸ್ವಿ, ಭವ್ಯ, ಅರವಿಂದ್​ ರಾವ್, ಸುನೀಲ್ ಪುರಾಣಿಕ್, ಸಿಂಚನಾ, ಪ್ರಶಾಂತ್ ಸಂಬರ್ಗಿ, ರಘು ರಾಮನಕೊಪ್ಪ, ಕಾಕ್ರೋಚ್ ಸುಧಿ ಮುಂತಾದವರು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

    ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರತಂಡ ಬಿಡುಗಡೆ ಮಾಡಿರುವ ಸ್ಟೂಡೆಂಟ್ ಪಾರ್ಟಿ ಹಾಡು ರ‍್ಯಾಪ್​ ಶೈಲಿಯಲ್ಲಿದೆ. ಈ ಹಾಡಿಗೆ ಚಂದನ್ ಶೆಟ್ಟಿ ಹಾಗೂ ವಿಜೇತ್ ಕೃಷ್ಣ ಧ್ವನಿ ನೀಡಿದ್ದಾರೆ. ವಿಜೇತ್ ಕೃಷ್ಣ ಮತ್ತು ಚಂದನ್ ಶೆಟ್ಟಿ ಕಾಂಬಿನೇಷನ್​ನಲ್ಲಿ ಬಂದ 2ನೇ ಸಾಂಗ್​ ಇದು. ವಿಶೇಷ ಏನೆಂದರೆ, ದಶಕದ ಹಿಂದೆ ವಿಜೇತ್ ಕೃಷ್ಣ, ಚಂದನ್ ಶೆಟ್ಟಿ, ಚೇತನ್ ಕುಮಾರ್ ರೂಮ್​ಮೇಟ್ಸ್​ ಆಗಿದ್ದರಂತೆ. ಈ ಮೊದಲು ವಿಜೇತ್ ಮತ್ತು ಚಂದನ್ ಶೆಟ್ಟಿ ಜೊತೆಯಾಗಿ ‘3 ಪೆಗ್​..’ ಹಾಡು ನೀಡಿದ್ದರು. ಅದು ಪಾರ್ಟಿಪ್ರಿಯರ ಮನ ಗೆದ್ದಿತ್ತು. ಅದೇ ರೀತಿ ಈಗ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದ ಪಾರ್ಟಿ ಸಾಂಗ್​ ಕೂಡ ಹಿಟ್​ ಆಗಲಿದೆ ಎಂಬುದು ತಂಡದ ಭರವಸೆ.

    ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ಮನೋಜ್ ವಿವಾನ್, ಭಾವನಾ ಅಪ್ಪು, ಮನಸ್ವಿ, ಅಮರ್ ಸಹ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. ಸಾಹಿತ್ಯ ಬರೆದಿರುವ ಚೇತನ್ ಕುಮಾರ್ ಅವರು ಮಾತನಾಡಿದರು. ವಿಜೇತ್ ಕೃಷ್ಣ ಅವರ ಸಂಗೀತ ಅಂದ್ರೆ ತಮಗೆ ಇಷ್ಟ ಎಂದು ಅವರು ಹೇಳಿದರು. ಆ ಪ್ರೀತಿಯ ಕಾರಣದಿಂದಲೇ ಈ ಸಾಂಗ್​ ಬರೆದಿರುವುದಾಗಿ ಹೇಳಿದ ಅವರು ಸಾಂಗ್​ ಸೂಪರ್​ ಹಿಟ್​ ಆಗಲಿ ಎಂದು ಶುಭ ಕೋರಿದರು.

    ಸುಬ್ರಮಣ್ಯ ಕುಕ್ಕೆ ಹಾಗೂ ಎ.ಸಿ. ಶಿವಲಿಂಗೇಗೌಡ ಅವರು ‘ವೆರೈಟಿ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಭರ್ಜರಿ ಚೇತನ್ ಹಾಗೂ ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದಾರೆ. ಶ್ರೀಕಾಂತ್ ಜಿ. ಕಶ್ಯಪ್ ಅವರು ಕಾರ್ಯಕಾರಿ ನಿರ್ಮಾಪಕನಾಗಿ ಕೆಲಸ ಮಾಡಿದ್ದಾರೆ. ಕುಮಾರ್ ಗೌಡ ಅವರ ಛಾಯಾಗ್ರಹಣ, ಪವನ್ ಗೌಡ ಅವರ ಸಂಕಲನ ಈ ಚಿತ್ರಕ್ಕಿದೆ. ಟೈಗರ್ ಶಿವು, ನರಸಿಂಹ ಅವರು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ವಿಜೇತ್ ಕೃಷ್ಣ ಮತ್ತು ವಾಸು ದೀಕ್ಷಿತ್ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ. ಬಿಡುಗಡೆ ಆಗಿರುವ ಹಾಡಿಗೆ ಅರುಣ್ ಸುರೇಶ್​ ಛಾಯಾಗ್ರಹಣ ಮಾಡಿದ್ದಾರೆ.

    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


    Provided by
    Provided by
    admin
    • Website

    Related Posts

    ವಾಸ್ತವ ವರದಿ ಪರಿಶೀಲನೆ ಬಳಿಕವೇ ಬರ ಘೋಷಣೆ ಮತ್ತು ಪರಿಹಾರ ವಿತರಣೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

    July 7, 2026

    ಮಂಗಳಮುಖಿ ವೇಷ ಧರಿಸಿ ದಂಧೆ ನಡೆಸ್ತಿದ್ದ ನಟೋರಿಯಸ್ ಪಿಂಪ್ ಪೊಲೀಸರ ವಶಕ್ಕೆ

    July 7, 2026

    ಬೆಂಗಳೂರಿನ ಜನಾಗ್ರಹ ಸಮಾವೇಶಕ್ಕೆ ಸರಗೂರು ತಾಲ್ಲೂಕಿನಿಂದ 200ಕ್ಕೂ ಹೆಚ್ಚು ದಲಿತ ಕಾರ್ಯಕರ್ತರ ಪ್ರಯಾಣ

    July 3, 2026

    Comments are closed.

    Our Picks

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಎಸ್ ಐಆರ್ ಪ್ರಕ್ರಿಯೆ ನಿರ್ಲಕ್ಷಿಸದೇ ಗಂಭೀರವಾಗಿ ಪರಿಗಣಿಸಿ: ಬಿಜೆಪಿ ಮುಖಂಡ ಸ್ಫೂರ್ತಿ ಚಿದಾನಂದ್ ಮನವಿ

    July 8, 2026

    ತುಮಕೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮುಂಬರುವ ದಿನಗಳಲ್ಲಿ ಪೌರತ್ವ ದೃಢೀಕರಿಸುವ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದ್ದು, ಭಾರತೀಯ ಮತದಾರರನ್ನು…

    ತುಮಕೂರು: ಜುಲೈ 10 ರಿಂದ 3 ದಿನಗಳ ಕಾಲ ‘ಬಿಲ್ಡ್ ಟೆಕ್-2026’ ಬೃಹತ್ ವಸ್ತು ಪ್ರದರ್ಶನ

    July 8, 2026

    ವಕೀಲರ ಮೇಲಿನ ಹಲ್ಲೆ ಖಂಡಿಸಿ ನ್ಯಾಯಾಲಯದ ಬಳಿ ಪ್ರತಿಭಟನೆ: ಕಲಾಪದಿಂದ ಹೊರಗುಳಿದ ವಕೀಲರು

    July 8, 2026

    ಸರಗೂರು: ನಿಯಮ ಗಾಳಿಗೆ ತೂರಿ ಕೆಪಿಎಸ್ ಶಾಲೆಗೆ ರಾಜಕೀಯ ನಾಯಕರ ನೇಮಕ – ಶಾಸಕರ ವಿರುದ್ಧ ಎಸ್ ಡಿಎಂಸಿ ಆಕ್ರೋಶ, ಪ್ರತಿಭಟನೆಗೆ ನಿರ್ಧಾರ

    July 8, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.