ತುಮಕೂರಿನ ಸಿದ್ದಗಂಗಾ ಮಠದ ಹಿಂಭಾಗದಲ್ಲಿರುವ ಗೋಕಟ್ಟೆಗೆ ತನ್ನ ತಾಯಿಯೊಂದಿಗೆ ಹೋದ ಸಂದರ್ಭದಲ್ಲಿ ಮಗ ಈಜಲು ಹೋಗಿ ನೀರು ಕುಡಿದು ಮೃತಪಟ್ಟಿರುವ ಘಟನೆ ಸಂಭವಿಸಿದ್ದು ಇನ್ನುಳಿದಂತೆ ಆತನನ್ನು ರಕ್ಷಿಸಲು ಹೋದ ಮೂವರು ಅಸುನೀಗಿದ್ದಾರೆ.
ಮಗನನ್ನು ರಕ್ಷಿಸಲು ಹೋದ ತಾಯಿ ಹಾಗೂ ಬಾಲಕನ ಸಹೋದರ, ಮತ್ತೊಬ್ಬ ಕೂಡ ನೀರು ಪಾಲಾಗಿದ್ದಾರೆ. ಮೊದಲಿಗೆ ಮುಳುಗುತ್ತಿದ್ದ ರಂಜಿತ್ ನನ್ನು ಬದುಕಿಸಲು ಮುಂದಾದ ಶ್ರೀಮಠದ ವಿದ್ಯಾರ್ಥಿಗಳಾದ ಶಂಕರ್( 11), ಹರ್ಷಿತ್(11) ಮೃತ ವಿದ್ಯಾರ್ಥಿ ಗಳಾಗಿದ್ದರೆ. ಇವರನ್ನು ರಕ್ಷಣೆ ಮಾಡಲು ನೀರಿಗಿಳಿದ ರಂಜಿತ್ ತಾಯಿ ಬೆಂಗಳೂರು ಬಾಗಲಗುಂಟೆಯ ಲಕ್ಷ್ಮೀ (33) ಹಾಗೂ ಯಾದಗಿರಿ ಜಿಲ್ಲೆಯ ಅಫ ಜಲಪುರದ ಮಹದೇವಪ್ಪ (44) ಕೂಡ ಮೃತರಾಗಿದ್ದಾರೆ.
ಶ್ರೀಮಠದಲ್ಲಿ 6ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಮಧ್ಯಾಹ್ನ ಗೋಕಟ್ಟೆಗೆ ಇಳಿದಿದ್ದರು ಎನ್ನಲಾಗಿದ್ದು ಘಟನೆಯಲ್ಲಿ ರಂಜಿತ್ ಎಂಬ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಾಮನಗರ ಮೂಲದ ಹರ್ಷಿತ್, ಹಾಗೂ ಚಿಕ್ಕಮಗಳೂರು ಮೂಲದ ಶಂಕರ್ ಮೃತ ವಿದ್ಯಾರ್ಥಿಗಳು.
ಸಿದ್ದಗಂಗಾ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗನನ್ನು ನೋಡಲು ತಾಯಿ ಬಂದಿದ್ದರು. ಈ ಸಂದರ್ಭದಲ್ಲಿ ಮಠದ ಹಿಂಭಾಗದಲ್ಲಿರುವ ಗೋ ಕಟ್ಟೆಗೆ ತಾಯಿ ಮತ್ತು ಮಗ ಹೋಗಿದ್ದಾರೆ.
ಈ ಸಂದರ್ಭದಲ್ಲಿ ಮಗ ಗೋಕಟ್ಟೆಯಲ್ಲಿ ಈಜಲು ನೀರಿಗೆ ಹಾರಿದ್ದಾನೆ. ಆದರೆ ಈಜು ಬಾರದೆ ವಿದ್ಯಾರ್ಥಿ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ನೋಡಿದ ತಾಯಿ ನೀರಿಗೆ ಹಾರಿ ಮಗನನ್ನು ರಕ್ಷಿಸಲು ಹೋಗಿ ಆಕೆಯೂ ನೀರು ಪಾಲಾಗಿದ್ದಾರೆ.
ಅಲ್ಲಿಯೇ ಇದ್ದ ಆತನ ಸ್ನೇಹಿತ ಕೂಡ ಗೋ ಕಟ್ಟೆಗೆ ತಾಯಿ ಮತ್ತು ಮಗನನ್ನು ರಕ್ಷಿಸಲು ಹೋಗಿದ್ದಾರೆ. ಆದರೆ ಆತನೂ ನೀರಿನಲ್ಲಿ ಮುಳುಗಿದ್ದಾನೆ.
ಇದೇ ವೇಳೆ ಅಲ್ಲಿಯೇ ಇದ್ದ ಮಹಾದೇವ ಎಂಬುವವರು ನೀರಿಗೆ ಬಿದ್ದವರನ್ನು ರಕ್ಷಿಸಲು ಹೋಗಿದ್ದು ಆತನಿಗೂ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಒಟ್ಟಾರೆ ವಿದ್ಯಾರ್ಥಿಯನ್ನು ರಕ್ಷಿಸಲು ಹೋದ ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಕ್ಯಾತ್ಸಂದ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಕ್ಯಾತ್ಸದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


