nammatumakuru

    Subscribe to Updates

    Get the latest creative news from FooBar about art, design and business.

    What's Hot

    ದೇಶದಲ್ಲಿ ಎಲ್‌ ಪಿಜಿ ಸಿಲಿಂಡರ್ ಕೊರತೆ: ತುಟಿಬಿಚ್ಚದ ಬಿಜೆಪಿ ಸಂಸದರು: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 10, 2026

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026

    ರಾಜ್ಯದ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ: ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

    March 10, 2026
    Facebook Twitter Instagram
    ಟ್ರೆಂಡಿಂಗ್
    • ದೇಶದಲ್ಲಿ ಎಲ್‌ ಪಿಜಿ ಸಿಲಿಂಡರ್ ಕೊರತೆ: ತುಟಿಬಿಚ್ಚದ ಬಿಜೆಪಿ ಸಂಸದರು: ಡಿ.ಕೆ.ಶಿವಕುಮಾರ್ ವಾಗ್ದಾಳಿ
    • LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!
    • ರಾಜ್ಯದ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ: ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ
    • ನೇಮಕಾತಿಯಲ್ಲಿ ಶೇ.7ರಷ್ಟು ಮೀಸಲಾತಿಗೆ ವಾಲ್ಮೀಕಿ ಸಮುದಾಯ ಒತ್ತಾಯ: ಮಾರ್ಚ್ 11ರಂದು ಪ್ರತಿಭಟನೆ
    • ಹಂಪಲಾಪುರ: ಭೂಮಿ ಹಕ್ಕಿಗಾಗಿ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ
    • ಗುಬ್ಬಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಬೆಸ್ಕಾಂ ಕಚೇರಿ ಮುಂದೆ ರೈತರಿಂದ ಪ್ರತಿಭಟನೆ
    • ಒಳ ಮೀಸಲಾತಿ ಜಾರಿಗೆ ಆಗ್ರಹ: ಮಾದರ ಮಹಾಸಭಾವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ
    • ಔರಾದ್: ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣಕ್ಕೆ ಭೀಮಸೇನರಾವ್ ಸಿಂದೆ ₹2.50 ಲಕ್ಷ ಆರ್ಥಿಕ ನೆರವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶಾಲೆಗೆ ತೆರಳದೆ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿ 6 ತಿಂಗಳ ನಂತರ ವಿದ್ಯಾರ್ಥಿನಿ ಶಾಲೆಗೆ: ವಿದ್ಯಾರ್ಥಿನಿಯ ಬೇಡಿಕೆ ಏನು?
    ತುಮಕೂರು January 20, 2026

    ಶಾಲೆಗೆ ತೆರಳದೆ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿ 6 ತಿಂಗಳ ನಂತರ ವಿದ್ಯಾರ್ಥಿನಿ ಶಾಲೆಗೆ: ವಿದ್ಯಾರ್ಥಿನಿಯ ಬೇಡಿಕೆ ಏನು?

    By adminJanuary 20, 2026No Comments1 Min Read
    beladhara school

    ತುಮಕೂರು: ತಾಲ್ಲೂಕಿನ ಬೆಳಧರ ಸರ್ಕಾರಿ ಶಾಲೆಗೆ ಕಾಂಪೌಂಡ್‌ ನಿರ್ಮಿಸುವಂತೆ ಒತ್ತಾಯಿಸಿ 6 ತಿಂಗಳಿನಿಂದ ಶಾಲೆಗೆ ತೆರಳದೆ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿಯನ್ನು ಮತ್ತೆ ಶಾಲೆಗೆ ಕರೆತರುವ ಕಾರ್ಯ ಯಶಸ್ವಿಯಾಗಿದೆ.

    4ನೇ ತರಗತಿ ವಿದ್ಯಾರ್ಥಿನಿ ಸಿಮ್ರಾ ಸನೋಬರ್‌ ಶಾಲೆಯಿಂದ ದೂರ ಉಳಿದು ಪ್ರತಿಭಟನೆ ನಡೆಸುತ್ತಿದ್ದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಹಾಗೂ ಅಧಿಕಾರಿಗಳ ತಂಡ ಸೋಮವಾರ ಬಾಲಕಿ ಮನೆಗೆ ಭೇಟಿ ನೀಡಿ ಅಹವಾಲು ಆಲಿಸಿತು.


    Provided by
    Provided by

    ‘ನನ್ನ ಶಾಲೆಗೆ ಭದ್ರತೆ ಬೇಕು. ಶಾಲಾ ಮೈದಾನದಲ್ಲಿ ಓಡಾಡುವ ವಾಹನಗಳಿಂದ ಕಿರಿಕಿರಿಯಾಗುತ್ತಿದೆ. ಕಾಂಪೌಂಡ್‌ ನಿರ್ಮಿಸಬೇಕು’ ಎಂದು ಸಿಮ್ರಾ ಮನವಿ ಮಾಡಿದರು. ‘ಶೀಘ್ರದಲ್ಲಿಯೇ ಕಾಂಪೌಂಡ್‌ ನಿರ್ಮಿಸಲಾಗುವುದು’ ಎಂದು ನೂರುನ್ನೀಸಾ ಭರವಸೆ ನೀಡಿದರು. ವಿದ್ಯಾರ್ಥಿನಿಯನ್ನು ಅವರ ಜತೆಯಲ್ಲಿಯೇ ಶಾಲೆಗೆ ಕರೆದುಕೊಂಡು ಬಂದರು.

    ತುಮಕೂರು ತಾಲ್ಲೂಕಿನ ಬೆಳಧರ ಸರ್ಕಾರಿ ಶಾಲೆಗೆ ವಿದ್ಯಾರ್ಥಿನಿಯನ್ನು ಸೋಮವಾರ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಕರೆ ತಂದರು. ಉಪವಿಭಾಗಾಧಿಕಾರಿ ನಾಹಿದಾ ಜಮ್‌ ಜಮ್‌, ತಹಶೀಲ್ದಾರ್‌ ಪಿ.ಎಸ್‌.ರಾಜೇಶ್ವರಿ ಇತರರು ಹಾಜರಿದ್ದರು.

    ಉಪವಿಭಾಗಾಧಿಕಾರಿ ನಾಹಿದಾ ಜಮ್‌ ಜಮ್‌, ತಹಶೀಲ್ದಾರ್‌ ಪಿ.ಎಸ್‌.ರಾಜೇಶ್ವರಿ, ರಾಜಸ್ವ ನಿರೀಕ್ಷಕ ಅರುಣ್‌ಕುಮಾರ್‌, ಗ್ರಾಮ ಆಡಳಿತಾಧಿಕಾರಿ ಅನಿಲ್‌, ಕಾಳಜಿ ಫೌಂಡೇಷನ್‌ನ ಶಿವಕುಮಾರ್‌ ಮೇಷ್ಟ್ರುಮನೆ, ಗಣೇಶ್ ಮಾರನಹಳ್ಳಿ, ರಫಿಪಾಷ, ಮುಖಂಡರಾದ ಅಯ್ಯನಪಾಳ್ಯ ಶ್ರೀನಿವಾಸ್‌, ಮಹಾಲಿಂಗಯ್ಯ, ಡಮರುಗ ಉಮೇಶ್‌ ಇತರರು ಹಾಜರಿದ್ದರು.

    ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕು, ಬೆಳಧರ ಶಾಲೆಯು ಸ್ವತಂತ್ರ ಪೂರ್ವದಲ್ಲಿಯೇ ಪ್ರಾರಂಭವಾದ ಶಾಲೆಯಾಗಿದ್ದು, ಸುಮಾರು 10–15 ಹಳ್ಳಿಗಳ ಕೃಷಿಕರ, ಬಡ ಅಲ್ಪಸಂಖ್ಯಾತ ಮಕ್ಕಳು, ಪರಿಶಿಷ್ಟಜಾತಿ ಪಂಗಡದ ಅತೀ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿರುವ ಶಾಲೆಯಾಗಿದೆ. ಆದ್ರೆ ಸ್ಥಳೀಯ ಖಾಸಗಿ ವ್ಯಕ್ತಿಯೊಬ್ಬ ಅಧಿಕಾರಿಗಳ ಬೆಂಬಲದೊಂದಿಗೆ ಸಮಾಜ ಸೇವಕನ ಸೋಗಿನಲ್ಲಿ ಶಾಲೆಯ ಕಾಂಪೌಂಡ್ ನ್ನೇ ಕಬಳಿಸಿದ್ದ. ಇದರ ವಿರುದ್ಧ ಕಾಳಜಿ ಪೌಂಡೇಷನ್ ಸೇರಿದಂತೆ ಹಲವು ಸಂಘಟನೆಗಳು, ಸ್ಥಳೀಯ ಮುಖಂಡರು ನಿರಂತರವಾಗಿ ಹೋರಾಟ ನಡೆಸಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ತುಮಕೂರು: ರೈತರ ಭೂಸ್ವಾಧೀನ ಕೈ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆ

    March 10, 2026

    ಮಹಿಳೆಯರಿಂದಲೇ ಮಹಿಳೆಯರ ಮೇಲೆ ನಡೆಯುವ ಶೋಷಣೆಗಳು ಮೊದಲು ನಿಲ್ಲಲಿ: ತಹಶೀಲ್ದಾರ್ ಮಮತಾ ಎಂ.

    March 9, 2026

    ಕಣ್ಣಿನ ಶಸ್ತ್ರಚಿಕಿತ್ಸೆಗೆ ಲಂಚ ಕೇಳಿದ್ದ ತುಮಕೂರು ಜಿಲ್ಲಾ ಆಸ್ಪತ್ರೆ ವೈದ್ಯೆ ಲೋಕಾಯುಕ್ತ ಬಲೆಗೆ

    March 9, 2026

    Leave A Reply Cancel Reply

    Our Picks

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026

    ಇಸ್ರೇಲ್–ಇರಾನ್ ಸಂಘರ್ಷ: ದುಬೈನಲ್ಲಿರುವ ಕನ್ನಡಿಗರ ನೆರವಿಗೆ ಸಹಾಯವಾಣಿ ಆರಂಭ

    March 3, 2026

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ದೇಶದಲ್ಲಿ ಎಲ್‌ ಪಿಜಿ ಸಿಲಿಂಡರ್ ಕೊರತೆ: ತುಟಿಬಿಚ್ಚದ ಬಿಜೆಪಿ ಸಂಸದರು: ಡಿ.ಕೆ.ಶಿವಕುಮಾರ್ ವಾಗ್ದಾಳಿ

    March 10, 2026

    ಬೆಂಗಳೂರು: ದೇಶದಲ್ಲಿ ಉಂಟಾಗಿರುವ ಅಡುಗೆ ಅನಿಲ (LPG) ಸಿಲಿಂಡರ್‌ಗಳ ತೀವ್ರ ಕೊರತೆ ಮತ್ತು ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರ…

    LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!

    March 10, 2026

    ರಾಜ್ಯದ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ: ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

    March 10, 2026

    ನೇಮಕಾತಿಯಲ್ಲಿ ಶೇ.7ರಷ್ಟು ಮೀಸಲಾತಿಗೆ ವಾಲ್ಮೀಕಿ ಸಮುದಾಯ ಒತ್ತಾಯ: ಮಾರ್ಚ್ 11ರಂದು ಪ್ರತಿಭಟನೆ

    March 10, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.