ತುಮಕೂರು: ಜ್ಯೂನಿಯರ್ ಆರ್ಟಿಸ್ಟ್ ಡ್ರಾಯಿಂಗ್ ಕ್ಲಾಸೆಸ್ ಕುಣಿಗಲ್ ಇದರ ವತಿಯಿಂದ 6 ವರ್ಷದಿಂದ 12 ವರ್ಷದವರೆಗಿನ 24 ಜನ ವಿದ್ಯಾರ್ಥಿಗಳ ಸಮೂಹ ಚಿತ್ರಕಲಾ ಪ್ರದರ್ಶನ ಫೆಬ್ರವರಿ 16ರಂದು ಬೆಳಿಗ್ಗೆ 9 ಗಂಟೆಗೆ ತುಮಕೂರಿನ ರವೀಂದ್ರ ಕಲಾ ನಿಕೇತನದ ಹೆಚ್ ಎಂ. ಗಂಗಾಧರಯ್ಯ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ.
ಬಾಪೂಜಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳಾದ ಎಂ. ಬಸವಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಮನು ಚಕ್ರವರ್ತಿಯವರು ಸದಸ್ಯರು ಕರ್ನಾಟಕ ಲಲಿತ ಅಕಾಡೆಮಿ- ಬೆಂಗಳೂರು ಮತ್ತು ಹರೀಶ್ ಪ್ರಾಂಶುಪಾಲರು ರವೀಂದ್ರ ಕಲಾ ನಿಕೇತನ ಚಿತ್ರಕಲಾ ಮಹಾವಿದ್ಯಾಲಯ ತುಮಕೂರು ಹಾಗೂ ಮುಖ್ಯ ಅತಿಥಿಗಳಾಗಿ ಗ್ರಾಮ್ ಪುರೋಹಿತರು, ನಿವೃತ್ತ ಚಿತ್ರಕಲಾ ಉಪನ್ಯಾಸಕರು, ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ ತುಮಕೂರು ಹಾಗೂ ಕರ್ನಾಟಕ ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲಾವಿದರು ಹಾಗೂ ಕರ್ನಾಟಕ ಲಲಿಕಲಾ ಅಕಾಡೆಮಿಯ ಮಾಜಿ ಸದಸ್ಯರಾದ ಎಸ್.ಹೆಚ್.ನಾಗರಾಜ್ ಮತ್ತು ಚಿತ್ರಕಲಾ ಪ್ರದರ್ಶನ ಮಕ್ಕಳು, ಪೋಷಕರು ಚಿತ್ರಕಲೆ ಶಿಕ್ಷಕರಾದ ಉಮಾಪತಿ ಎನ್ . ಸುಗೂರ್, ಸಿದ್ದೇಶ್ ಅವರು ಭಾಗವಹಿಸಲಿದ್ದಾರೆ.
ಈ ಚಿತ್ರಕಲಾ ಪ್ರದರ್ಶನವು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತೆರೆದಿರುತ್ತದೆ. ಸಾರ್ವಜನಿಕರು ಬಂದು ವೀಕ್ಷಿಸಿ ಮಕ್ಕಳನ್ನು ಪ್ರೋತ್ಸಾಹಿಸುವಂತೆ ಕಾರ್ಯಕ್ರಮ ಆಯೋಜಕರು ಮನವಿ ಮಾಡಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4