ತಿಪಟೂರು: ವಿದ್ಯಾರ್ಥಿಗಳು ಉದ್ಯೋಗವನ್ನು ಹುಡುಕದೆ ಸ್ವಂತ ಉದ್ಯಮಿಗಳಾಗಿ ಉದ್ಯೋಗವನ್ನು ಮಾಡಬೇಕು, ಪ್ರತಿಯೊಬ್ಬ ವ್ಯಕ್ತಿಗಳು ದೇಶದ ಅಭಿವೃದ್ಧಿಗೆ ಸೈನಿಕರು, ರೈತರು, ಸ್ವಂತ ಉದ್ಯಮಿಗಳಾಗಿ ಬೆಳೆದು ದೇಶಕ್ಕೆ ಕೊಡಗೆ ನೀಡಬೇಕೆಂದು ಕಾಪರ್ ಇಂಡಸ್ಟ್ರೀಸ್ ಚೇರ್ಮನ್ ಚಂದ್ರಶೇಖರ್ ತಿಳಿಸಿದರು.
ವಿವಿಧ ಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಉದ್ಯಮಶೀಲತೆ ವೃತ್ತಿಗಾಗಿ ಅವಕಾಶಗಳ ಮಹಾಸಾಗರ ಎಂಬ ಕಾರ್ಯಾಗಾರದಲ್ಲಿ ಮಾತನಾಡಿ, ನಾನು ದೇಶಕ್ಕಾಗಿ ಏನು ಮಾಡಿದೆ ತೆರಿಗೆ ಪಾವತಿಸುವುದರ ಮೂಲಕ ದೇಶದ ಆದಾಯವನ್ನು ಹೆಚ್ಚಿಸಿ ರಾಷ್ಟ್ರವನ್ನು ಅಭಿವೃದ್ಧಿಯತ್ತ ಮುನ್ನಡೆಸಬೇಕು ಎಂದರು.
ತುಮಕೂರಿನ ವಿವಿಯ ರಿಜಿಸ್ಟರ್ ಎನ್. ಕೊಟ್ರೇಶ್ ಮಾತನಾಡಿ, ತುಮಕೂರು ವಿವಿ ದೇಶದ ಪ್ರತಿಷ್ಠಿತ ವಿದ್ಯೆ ವಿಶ್ವವಿದ್ಯಾಲಯವಾಗಿದೆ ದೇಶದ 75 ವಿವಿಗಳಲ್ಲಿ ತುಮಕೂರು ಇವತ್ತು 53ನೇ ಸ್ಥಾನ ಪಡೆದಿರುವುದು ನಮ್ಮೆಲ್ಲರ ಹೆಮ್ಮೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಸಿಇಒ ಡಾಕ್ಟರ್ ಸತೀಶ್ ಎಂ. ಬಾವಣ್ಕರ್ ಹಾಗೂ ಕಲ್ಪತರು ವಿದ್ಯಾ ಸಂಸ್ಥೆಯ ಅಧ್ಯಕ್ಷ ಪಿ.ಕೆ.ರುದ್ರಪ್ಪನವರು ಹಾಗೂ ಸಂಸ್ಥೆಯ ಉಪಾಧ್ಯಕ್ಷ ಬಾಗೆಪಲ್ಲಿ ನಟರಾಜ್, ಜಿ.ಪಿ.ದೀಪಕ್, ಎಮ್.ಆರ್.ಸಂಗಮೇಶ್, ಖಜಾಂಚಿ ಶಿವಪ್ರಸಾದ್, ಕೆ.ಏ.ಟಿ.ಪ್ರಾಂಶುಪಾಲ ಎಫ್.ಸಿ.ಸತೀಶ್ ಕುಮಾರ್ ಉಪನ್ಯಾಸಕರುಗಳು ಹಲವಾರು ಬೋಧಕ ಸಿಬ್ಬಂದಿಯವರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC