ಸರಗೂರು: ಎನ್ ಎಂ ಎಂ ಎಸ್ ರಾಷ್ಟ್ರೀಯ ಸಾಧನೆ ಆಧಾರಿತ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಬಾರದೆ ಇರುವುದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಅದರಲ್ಲಿ ರಿನಿವಲ್ ಅರ್ಜಿಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ನೊಂದ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಅನುದಾನಿತ ಶಾಲೆಗಳ ಎಂಟನೇ ತರಗತಿಯಲ್ಲಿ ಎನ್ ಎಂ ಎಂ ಎಸ್ ವಿದ್ಯಾರ್ಥಿ ವೇತನ ಪರೀಕ್ಷೆ ನಡೆಸಲಾಗುತ್ತಿದ್ದು.ಇದರಲ್ಲಿ ಉತೀರ್ಣರಾದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ವರೆಗೆ ಪ್ರತಿ ವರ್ಷ 12,000 ರೂಗಳಂತೆ ನೀಡಲಾಗುತ್ತದೆ. ಇದರೆ ಎರಡು ವರ್ಷಗಳಿಂದ ಎಸ್ಸಿ ಎಸ್ಟಿ ಮಕ್ಕಳಿಗೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಎಸ್ಸಿ ಎಸ್ಟಿ ಮಕ್ಕಳ ರೀನಿವಲ್ ಅರ್ಜಿಗಳನ್ನು ಸಲ್ಲಿಸಿದ್ದರೂ ಅದನ್ನು ತಿರಸ್ಕರಿಸಿದ್ದಾರೆ. ಆ ವಿದ್ಯಾರ್ಥಿವೇತನದಿಂದ ವಿದ್ಯಾಬ್ಯಾಸ ಮಾಡಲು ಅನುಕೂಲವಾಗುವಂತೆ ವಿದ್ಯಾರ್ಥಿಗಳು ವ್ಯಾಸಂಗ ಮಾಡಿಕೊಂಡು ಬರುತ್ತಿದ್ದಾರೆ. ಇವಾಗ ಕೇಂದ್ರ ಸರ್ಕಾರ ಮಟ್ಟದಲ್ಲಿ ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ ನೊಂದ ವಿದ್ಯಾರ್ಥಿಗಳು ಆಗ್ರಹಿಸಿದರು.
ಸಾಮಾನ್ಯ ವರ್ಗ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ.ಎಸ್ಸಿ ಎಸ್ಟಿ ವರ್ಗದ ವಿದ್ಯಾರ್ಥಿಗಳಿಗೆ ವೇತನವನ್ನು ಸರ್ಕಾರ ಅನ್ಯಾಯ ಮಾಡುತ್ತಿದ್ದಾರೆ. ವಿದ್ಯಾರ್ಥಿವೇತನ ವಂಚಿತರಾಗಿದ್ದಾರೆ ಎಂದು ಕಂಡು ಬಂದಿದೆ.
ಎರಡು ವರ್ಷಗಳಿದಲ್ಲಿ ವಿದ್ಯಾರ್ಥಿವೇತನ ಬಂದಿಲ್ಲ. ಇದರಿಂದ ಎನ್ ಎಸ್ ಪಿ ಯಲ್ಲಿ ರಿನಿವಲ್ ಅರ್ಜಿಗಳನ್ನು ತೆಗೆದುಕೊಳ್ಳುತ್ತಿಲ್ಲ. ರಾಜ್ಯಾದ್ಯಂತ ನೂರಾರು ವಿದ್ಯಾರ್ಥಿಗಳು( ಮೈಸೂರು ಜಿಲ್ಲೆಯಲ್ಲಿ 101) ಈ ರೀತಿಯಾಗಿ ವಿದ್ಯಾರ್ಥಿವೇತನದಿಂದ ವಂಚಿತರಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.
ಪೋಷಕರಾದ ಚಂದ್ರಶೇಖರ, ರಾಮಚಂದ್ರ, ಸುನೀತಮ್ಮ ಮೊದಲಾದವರು ಮಾತನಾಡಿ, 23–24 ಸಾಲಿನಲ್ಲಿ ನಮ್ಮ ಮಕ್ಕಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇದು ವರೆಗೂ ವಿದ್ಯಾರ್ಥಿವೇತನ ಬಂದಿಲ್ಲ.ಇದ್ದರಿಂದಾಗಿ ಎನ್ ಎಸ್ ಪಿ ಯಲ್ಲಿ ಈ ಬಾರಿ ರಿನಿವಲ್ ಅರ್ಜಿಗಳನ್ನು ತೆಗೆದುಕೊಳ್ಳುತ್ತಿಲ್ಲ. ಈ ಬಾರಿಯು ವಿದ್ಯಾರ್ಥಿ ವೇತನ ಬರೆದಿದ್ದರೆ ಒಟ್ಟು 4 ವರ್ಷಗಳ ವಿದ್ಯಾರ್ಥಿಗಳ ವೇತನ ಬರುವುದಿಲ್ಲ. ಮಕ್ಕಳು ಉತೀರ್ಣರಾಗಲು ಶ್ರಮಿಸಿದ ಶಿಕ್ಷಕರ ಶ್ರಮವೂ ವ್ಯರ್ಥವಾಗುತ್ತಿದೆ. ಹಾಗಾದರೆ ಈ ಪರೀಕ್ಷೆಯಲ್ಲಿ ಯಾಕೆ ನಡಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರೆ ಮೂಲಕ ಮಾತನಾಡಿದ ಎನ್ ಎಂಎಂಎಸ್ ನೋಡಲ್ ಅಧಿಕಾರಿ ಶಿವಶಂಕರ್, ಎನ್ ಪಿಎಸ್ ಕೋಟಾದಲ್ಲಿ ಎರಡು ವಿದ್ಯಾರ್ಥಿವೇತನ ಬರುತ್ತದೆ. ಅದರಲ್ಲಿ ಎಸ್ಸಿ ಎಸ್ಟಿ ಇನ್ನೊಂದು ಮೆರಿಟ್ ವಿದ್ಯಾರ್ಥಿವೇತನ ಇದೆ. ಎಸ್ಸಿ ಎಸ್ಟಿ ವೇತನವನ್ನು ಈ ವರ್ಷದಲ್ಲಿ ಅಂತ್ಯಗೊಳಿಸಿದ್ದಾರೆ. ಬೇರೆ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಇನ್ನೂ ಉಳಿದ ಮಕ್ಕಳಿಗೆ ರಿನಿವಲ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಂದೇ ವಿದ್ಯಾರ್ಥಿವೇತನ ಎಂದುಕೊಂಡು ಎನ್ ಪಿ ಎಸ್ ನಲ್ಲಿ ಓಲ್ಡ್ ಮಾಡಿದ್ದಾರೆ. ಬೇರೆ ಬೇರೆ ವಿದ್ಯಾರ್ಥಿವೇತನ ಇದೆ. ಅದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಎನ್ ಪಿ ಎಸ್ ನಲ್ಲಿ ನಮ್ಮ ಕಚೇರಿಂದ ಬೆಂಗಳೂರು ಕಚೇರಿಯಿಂದ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುಬೇಕು ಕೇಂದ್ರಕ್ಕೆ ಅರ್ಜಿಯನ್ನು ವಿದ್ಯಾರ್ಥಿ ವೇತನ ನೀಡಬೇಕು ಎಂದು ಅರ್ಜಿ ನೀಡಲಾಗಿದೆ ಎಂದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC