ಬೆಂಗಳೂರು: ಭೂಮಿ ತಂತ್ರಾಂಶದಲ್ಲಿ ಅನುಮೋದನೆ ನೀಡಿದ ಆರೋಪದ ಹಿನ್ನಲೆಯಲ್ಲಿ ಯಲಹಂಕ ಉಪವಿಭಾಗಾಧಿಕಾರಿ ಎಂ. ಜಿ. ಶಿವಣ್ಣ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಯಲಹಂಕ ಉಪವಿಭಾಗಾಧಿಕಾರಿಯಾಗಿದ್ದ ಎಂ. ಜಿ. ಶಿವಣ್ಣ ಅವರನ್ನು ಕಳೆದ ಫೆ. 2ರಂದು ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಗೊಂಡ ನಂತರವು ಭೂಮಿ ತಂತ್ರಾಂಶದಲ್ಲಿ ಅನುಮೋದನೆ ನೀಡಿರುವುದು ತನಖೆಯಿಂದ ಸಾಬೀತಾಗಿತ್ತು.
ಇದು ಕ್ರಿಮಿನಲ್ ಸ್ವರೂಪದ ಅಪರಾಧವಾಗಿರುವುದರಿಂದ ಶಿವಣ್ಣ ವಿರುದ್ಧ ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 192(ಎ)ರಡಿ ಎಫ್ ಐಆರ್ ದಾಖಲಾಗಿದೆ.


