ಬೆಳಗಾವಿ: ತಾಲೂಕಿನ ಹೊಸವಂಟಮುರಿ ಗ್ರಾಮದಲ್ಲಿ ನಡೆದ ಘಟನೆ ಮತ್ತೆ ರಾಜ್ಯದಲ್ಲಿ ಇಂಥ ಪ್ರಕರಣಗಳು ಮರುಕಳಿಸಬಾರದು ಎಂದು ಜಾಗೃತ ಮಹಿಳಾ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿಗಳ ಮುಖಾಂತರ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸತೀಶ್ ಜಾರಕಿಹೊಳಿ ಹಾಗೂ ಮಹಿಳಾ ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಸಂಘಟನೆಯ ಸದಸ್ಯರ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳೆಯರನ್ನು ಬೆತ್ತಲೆಗೊಳಿಸಿ ಮರಕ್ಕೆ ಕಟ್ಟಿ ಹಾಕಿ ಹೊಡೆಯುವ ದೌರ್ಜನ್ಯ ಎಸಗಿರುವ ಪ್ರಕರಣ ತುಂಬಾ ಖಂಡನೀಯವಾಗಿದೆ. ಇಂಥದೊಂದು ಪ್ರಕರಣ ಮಾನವ ಕುಲವೇ ತಲೆತಗ್ಗಿಸುವಂತೆ ಆಗಿದೆ. ಮಣಿಪುರದಲ್ಲಿ ನಡೆದಿರುವ ಘಟನೆ ಈ ದೇಶದಲ್ಲಿ ಚರ್ಚೆ ಗೀಡಾಗಿತ್ತು. ಅಂತಹದೇ ಘಟನೆ ಚರ್ಚೆ ಈಗ ಕರ್ನಾಟಕದಲ್ಲಿ ನಡೆದಿರುವುದು ದುರ್ದೈವದ ಸಂಗತಿ ಹೆಣ್ಣು ಅಂದರೆ ಭೋಗದ ವಸ್ತು ಅಲ್ಲ. ಆಟಿಕೆಯು ಅಲ್ಲ ಮನಬಂದಂತೆ ನಡೆಸಿಕೊಳ್ಳುವ, ಶಿಕ್ಷಿಸುವ ಪ್ರಾಣಿಯೂ ಅಲ್ಲ ಎಂಬ ಮನಸ್ಥಿತಿಯುಳ್ಳ ಸ್ವಸ್ಥ ಸಮಾಜವನ್ನು ಕಟ್ಟುವ ಜವಾಬ್ದಾರಿ ಈ ಬಗ್ಗೆ ಚಿಂತಿಸುವವರೆಲ್ಲರೂ ಮೇಲೆ ಇದೆ.
ಮಹಿಳೆ ಮೇಲೆ ನಡೆಯುವ ಬಹುತೇಕ ದೌರ್ಜನ್ಯ ಕೃತಿಗಳು ಪುರುಷ ಅಹಂಕಾರದ ಕೃತ್ಯವಾಗಿದೆ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದರು. ಈ ಸಂದರ್ಭದಲ್ಲಿ ಸುಹಾಸನಿ ಕುರಬೆಟ್, ಶಿಲ್ಪ ಒಂಟೆ ಸುಮಿತ್ರ ,ಲಕ್ಷ್ಮಿ, ಜ್ಯೋತಿ, ಕವಿತಾ ,ಆಶಾ, ಗಂಗವ್ವ ಮುಂತಾದವರು ಉಪಸ್ಥಿತರಿದ್ದರು.


