ಆಲ್ಡರ್‌ವುಡ್ ಮಾಲ್‌ನಲ್ಲಿರುವ ಆಪಲ್ ಸ್ಟೋರ್‌ನಲ್ಲಿ ಆಘಾತಕಾರಿ ಕಳ್ಳತನ ನಡೆದಿದೆ. ವಾಶ್ ರೂಂ ನಿಂದ ಸುರಂಗ ಮಾರ್ಗದ ಮೂಲಕ ಆ್ಯಪಲ್ ಸ್ಟೋರ್ ಪ್ರವೇಶಿಸಿದ ಕಳ್ಳರು 5 ಲಕ್ಷ ಡಾಲರ್ ಮೌಲ್ಯದ 436 ಐಫೋನ್ ಗಳನ್ನು ಕದ್ದೊಯ್ದಿದ್ದಾರೆ.
ಅಂಗಡಿಯ ಸಮೀಪದಲ್ಲಿರುವ ಸಿಯಾಟಲ್ ಕಾಫಿ ಗೇರ್ ಕಾಫಿ ಅಂಗಡಿಗೆ ಇಬ್ಬರು ಕಳ್ಳರು ಬೀಗ ಮುರಿದು ಒಳ ನುಗ್ಗಿದ್ದಾರೆ. ಬಳಿಕ ಇಲ್ಲಿನ ಶೌಚಾಲಯದ ಗೋಡೆ ಒಡೆದು ಆ್ಯಪಲ್ ಸ್ಟೋರ್ ಗೆ ಸುರಂಗ ಮಾರ್ಗ ನಿರ್ಮಿಸಿದ್ದಾರೆ. ಹೀಗಾಗಿ ಕಳ್ಳರು ಅಂಗಡಿಗೆ ನುಗ್ಗಿದ್ದಾರೆ.
ದರೋಡೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕುರಿತು ವಿಸ್ತೃತ ತನಿಖೆ ನಡೆಯುತ್ತಿದ್ದು, ಶೀಘ್ರವೇ ಕಳ್ಳರನ್ನು ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆ್ಯಪಲ್ ಸ್ಟೋರ್ ನ ಬಾಗಿಲು ಒಡೆದು ಹಾಕುವ ಯತ್ನ ನಡೆದರೆ ಅಲಾರಾಂ ಮೊಳಗುತ್ತದೆ ಎಂದು ಭಾವಿಸಿ ಸುರಂಗ ಮಾರ್ಗ ಮಾಡಿ ಕಳ್ಳತನಕ್ಕೆ ಯೋಜನೆ ರೂಪಿಸಲಾಗಿತ್ತು ಎಂದು ತೀರ್ಮಾನಿಸಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


