ಕೊರಟಗೆರೆ: ಕ್ರೀಡೆಯಲ್ಲಿ ಭಾಗವಹಿಸುವುದು ಮಹತ್ವದ್ದೇ ಹೊರೆತು, ಸೋಲು–ಗೆಲುವು ಮುಖ್ಯವಲ್ಲ. ಕ್ರೀಡಾಪಟುಗಳು ಶಿಸ್ತು, ಸಮಯವನ್ನು ಪಾಲಿಸಬೇಕು. ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಗೃಹ ಸಚಿವರ ವಿಶೇಷ ಅಧಿಕಾರಿ ಡಾ.ನಾಗಣ್ಣ ತಿಳಿಸಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಉಪನಿರ್ದೇಶಕರ ಕಾರ್ಯಾಲಯ ಮಧುಗಿರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕೊರಟಗೆರೆ ಇವರ ಸಹಯೋಗದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಯು/14 ಮತ್ತು ಯು/17 ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಧ್ವಜಾರೋಹಣ ನೆರವೇರಿಸಿ ಕ್ರೀಡಾಜ್ಯೋತಿ ಹಿಡಿದು ಕ್ರೀಡೆಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡಾ ಕ್ಷೇತ್ರ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಎಂದಿಗೂ ವಿಶೇಷ ಗೌರವವಿದೆ. ಅವರು ಸದಾ ಸ್ಪೂರ್ತಿದಾಯಕರಾಗಿರುತ್ತಾರೆ. ಮಕ್ಕಳು ಜಿಲ್ಲಾಮಟ್ಟದಲ್ಲಿ ಗೆಲುವು ಸಾಧಿಸಿ ರಾಜ್ಯ,ರಾಷ್ಟ್ರ ಮಟ್ಟದಲ್ಲಿ ಸಾಧನೆ ತೋರಬೇಕು ಎಂದು ಹೇಳಿದರು.
ಮಧುಗಿರಿ ಡಿಡಿಪಿಐ ಮಾಧವರೆಡ್ಡಿ ವಿ. ಕ್ರೀಡಾಕೂಟದ ಪ್ರಾಸ್ತಾವಿಕ ನುಡಿಗಳನ್ನಾಡಿ, ಕ್ರೀಡೆಯಲ್ಲಿ ಸೋಲು–ಗೆಲುವು ಎಲ್ಲರಿಗೂ ಇರುತ್ತದೆ. ಆದರೆ ಸತತ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು ಸಾಧ್ಯ. ವಿದ್ಯಾರ್ಥಿಗಳು ಶಿಸ್ತು, ಒಳ್ಳೆಯ ಪ್ರಯತ್ನ, ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಮಧುಗಿರಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ದೊಡ್ಡ ಯರಗಾಮಯ್ಯ, ಕೊರಟಗೆರೆ ಬಿಇಒ ಫೈರೋಜ್ ಬೇಗಂ, ವೇದಮೂರ್ತಿ, ವಜೀದ್ ಖಾನ್, ಅಜಯ್ ಕುಮಾರ್, ನೌಕರರ ಸಂಘದ ಅಧ್ಯಕ್ಷ ರುದ್ರೇಶ್, ಕೆಂಚಪ್ಪ, ಜಗದೀಶ್, ಬಿಆರ್‌ಸಿ ರುದ್ರೇಶ್, ನರಸಿಂಹರಾಜು, ಕೋಟೆ ಕಲ್ಲಯ್ಯ, ಹನುಮಂತರಾಯಪ್ಪ, ಗುರುರಾಜ್, ಈರಣ್ಣ, ಲಕ್ಷ್ಮಿಪುತ್ರ, ಧರ್ಮೆಂದ್ರ ಪ್ರಸಾದ್, ಶ್ರೀನಿವಾಸ್, ಸಂಜಯ್, ಪರಮೇಶ್, ಚಿಕ್ಕಪ್ಪಯ್ಯ, ಗುಂಡುರಾವ್, ವಿರೇಶ್ ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



