ನೆಲ ಸ್ವಚ್ಛಗೊಳಿಸುವ ದ್ರಾವಣ ಸೇವಿಸಿ, ಅನ್ನನಾಳಕ್ಕೆ ಹಾನಿ ಮಾಡಿಕೊಂಡಿದ್ದ ಬೆಂಗಳೂರು ನಗರದ 6 ವರ್ಷದ ಬಾಲಕಿಗೆ ನಗರದ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಮನೆಯಲ್ಲಿ ಆಟವಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನೆಲ ಸ್ವಚ್ಛಗೊಳಿಸುವ ದ್ರಾವಣವನ್ನು ಬಾಲಕಿ ಸೇವಿಸಿದ್ದಳು. ಇದರಿಂದ ಆಕೆಯ ಅನ್ನನಾಳ ಹಾಗೂ ಸಣ್ಣ ಕರುಳಿನ ಒಂದು ಭಾಗ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಹಾನಿಗೊಳಗಾದ ಅನ್ನನಾಳವನ್ನು ತೆಗೆದು, ಕೊಳವೆ ಮೂಲಕ ಅವಳ ಸಣ್ಣ ಕರುಳಿಗೆ ನೇರವಾಗಿ ಆಹಾರವನ್ನು ನೀಡಲು ವ್ಯವಸ್ಥೆ ಮಾಡಲಾಗಿತ್ತು. ಇದೂ ಸಹ ಆಕೆಗೆ ಕಷ್ಟವಾಗುತ್ತಿತ್ತು.
ಹೀಗಾಗಿ, ಉದರ ತಜ್ಞ ಡಾ. ಮನೀಶ್ ಜೋಶಿ ತಂಡವು ಸಂಪೂರ್ಣವಾಗಿ ಸುಟ್ಟು ಕಿರಿದಾಗಿದ್ದ ಅನ್ನನಾಳವನ್ನು ತೆಗೆದು, ಕೊಳವೆಯನ್ನು ನೇರವಾಗಿ ಬಾಲಕಿಯ ಸಣ್ಣ ಕರುಳಿಗೆ ಅಳವಡಿಸಿತು. ಈ ಮೂಲಕ ಅನ್ನನಾಳವನ್ನು ಮರು ನಿರ್ಮಾಣ ಮಾಡಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.
‘ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನಿಂದ ಅನ್ನನಾಳವನ್ನು ಮರುನಿರ್ಮಾಣ ಮಾಡಲಾಗಿದೆ. ಇದರಿಂದ ಇದೀಗ ಬಾಲಕಿಯು ಬಾಯಿಯ ಮೂಲಕ ಆಹಾರ ಸೇವಿಸಬಹುದಾಗಿದೆ’ ಎಂದು ಡಾ. ಮನೀಶ್ ಜೋಶಿ ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


