ಕೊರಟಗೆರೆ: ಗ್ರಾಪಂಗೆ 15 ದಿನಕ್ಕೊಮ್ಮೆ ಬರುವ ಪಿಡಿಓ ಗ್ರಾಪಂ ಸಭೆಗಳನ್ನೇ ಮಾಡದೇ ಸದಸ್ಯರ ಮನೆ ಹತ್ತಿರ ಹೋಗಿ ಸಹಿ ಪಡೆದು ಅನುದಾನ ದುರುಪಯೋಗ ಮಾಡ್ತಾರೇ ಎಂದು ಆರೋಪಿಸಿ, ಗ್ರಾ.ಪಂ. ಸದಸ್ಯರಿಂದಲೇ ಗ್ರಾಮ ಪಂಚಾಯತಿ ಮುಂಭಾಗ ಬೆಳ್ಳಂಬೆಳಗ್ಗೆ ದಿಢೀರ್ ಪ್ರತಿಭಟನೆ ನಡೆಸಿದರು.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರ ಗ್ರಾ.ಪಂ. ಕಚೇರಿಯ ಮುಂದೆ ಗ್ರಾಪಂ ಸದಸ್ಯರಿಂದ ಪ್ರತಿಭಟನೆ ನಡೆಯಿತು. ಕಂದಾಯ ವಸೂಲಾತಿಯ ಮಾಹಿತಿ ಕೇಳಿದ್ರೇ ಪುಸ್ತಕಗಳೇ ಕಚೇರಿಯಲ್ಲಿ ಇಲ್ಲ ಕಳೆದಿವೆ, ನಕಲು ರಸೀದಿಗಳು ನನಗೇ ಹಿಂದಿನ ಪಿಡಿಓ ನೀಡಿಲ್ಲ ಅಂತಾರೇ ಎಂದು ಉಡಾಫೆ ಉತ್ತರ ನೀಡ್ತಾರೇ ಎಂಬ ಆರೋಪ ಮಾಡಿದರು.
ಅಂಗಡಿ ಮಳಿಗೆ ಮತ್ತು ತರಕಾರಿ ಸಂತೆಯ ಹರಾಜು ಅವಧಿ ಮುಗಿದು ವರ್ಷಗಳೇ ಕಳೆದು ಗ್ರಾ.ಪಂ. ಸದಸ್ಯರಿಗೆ ಅದರ ಮಾಹಿತಿಯೇ ನೀಡದೇ ಗೌಪ್ಯವಾಗಿ ಇಡುತ್ತಿರೋದು ಏಕೆ ಎಂದು ಪ್ರಶ್ನಿಸಿದರು.
ಅಕ್ಕಿರಾಂಪುರ ಗ್ರಾ.ಪಂ. ಅಧ್ಯಕ್ಷೆಯ ಪತಿ ನಾಗರಾಜು ಮತ್ತು ಪಿಡಿಓ ರವಿಕುಮಾರ್ ಏಕಪಕ್ಷಿಯ ನಿರ್ಧಾರಕ್ಕೆ ಬೇಸತ್ತು, ನಮ್ಮ ಗ್ರಾ.ಪಂ. ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ಗ್ರಾಪಂ ಸದಸ್ಯರಾದ ಮಧುಸೂದನ್ ಮತ್ತು ಲೋಕೇಶ್ ತಿಳಿಸಿದರು.
ನರೇಗಾ ಕಾಮಗಾರಿ ಕ್ರಿಯಾ ಯೋಜನೆ ಅಧ್ಯಕ್ಷೆಯ ಪತಿರಾಯ ಮಾಡ್ತಾರೇ, ಪಿಡಿಓ ನೆಪಮಾತ್ರಕ್ಕೆ ಬಂದು ಹೋಗ್ತಾರೇ. ಗೃಹಸಚಿವರು ಮತ್ತು ಸರಕಾರದ ಮುಖ್ಯಕಾರ್ಯದರ್ಶಿಗಳು ನಮ್ಮ ಗ್ರಾ.ಪಂ. ಸಮಸ್ಯೆಯನ್ನು ತನಿಖೆ ನಡೆಸಿ ಬಗೆಹರಿಸಬೇಕಿದೆ ಎಂದು ಆಗ್ರಹ ಮಾಡಿದರು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx