ಬೆಂಗಳೂರು: ‘ವೈಯಾಲಿಕಾವಲ್ ಠಾಣೆಯ ಪೊಲೀಸರು ಹಾಗೂ ಇತರರು ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿ ಮರಣಪತ್ರ ಬರೆದಿಟ್ಟು ನಾಗರಾಜ್ (47) ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ.
ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ನಾಗರಾಜ್, ಉದ್ಯಮಿ ಸನಾವುಲ್ಲ ಒಡೆತನದ ಇಪಿಪಿ (ಎನ್ವಿರಾನ್ ಮೆಂಟ್ ಪೊಲ್ಯೂಷನ್ ಪ್ರಾಜೆಕ್ಟ್) ಕಂಪನಿ ಉದ್ಯೋಗಿ, ಬುಧವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದರು.


