ಬೆಂಗಳೂರು: ರಾಜ್ಯದಲ್ಲಿ ಅಧಿವೇಶನ ಪ್ರಾರಂಭವಾಗಿದ್ದು ಆರೋಪ ಪ್ರತ್ಯಾರೋಪಗಳ ಪಟ್ಟಿ ಬೆಳೆಯುತ್ತಲೇ ಇದೆ. ಬಿಜೆಪಿ ಸರಕಾರದ ವಿರುದ್ಧ ಸರ್ಕಾರ ಧಾವಂತದಲ್ಲಿ ಟೆಂಡರ್ ಗಳನ್ನು ಕರೆದು ಅಲಾಟ್ ಮಾಡಿದೆ ಎಂದು ಬಿಜೆಪಿ ಶಾಸಕರೇ ಆಗಿರುವ ಗೂಳಿಹಟ್ಟಿ ಶೇಖರ್ ದಾಖಲೆ ಸಮೇತ ಅರೋಪ ಮಾಡಿರುವುದನ್ನು ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ಮೇಲೆ ದಾಳಿ ನಡೆಸುತ್ತಿದೆ.
ಗುತ್ತಿಗೆ ವಿಷಯದಲ್ಲಿ ಬಿಜೆಪಿಯು ಕಮಿಷನ್ ಸರಕಾರ ಎಂದು ಆರೋಪ ಮಾಡಿರುವ ಕಾಂಗ್ರೆಸ್ ಪಕ್ಷಕ್ಕೆ ಈ ವಿವಾಧವು ಅಸ್ತ್ರವಾಗಿ ಪರಿಣಮಿಸಿದೆ. ಈ ವಿಷಯದ ಕುರಿತು ಮಾತನಾಡಿದ ಬಿಜೆಪಿ ಶಾಸಕ ಸಿಟಿ ರವಿ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ ಎಂದು ಅಲ್ಲಗಳೆದಿದ್ದಾರೆ.
ವಿಧಾನ ಸೌಧದ ಬಳಿ ಮಾಧ್ಯಮಗಳೊಡನೆ ಮಾತಾಡಿದ ಬಿಜೆಪಿ ಅವರು ಕಾಂಗ್ರೆಸ್ ಆಧಾರವಿಲ್ಲದೆ ಆರೋಪ ಮಾಡುವುದನ್ನು ಕರಗತ ಮಾಡಿಕೊಂಡಿದೆ. ಕಾಂಗ್ರೆಸ್ ನಾಯಕರಾಗಲೀ, ಶೇಖರ್ ಅವರಾಗಲೀ ವಿಷಯವನ್ನು ಸದನದಲ್ಲಿ ಯಾಕೆ ಪ್ರಸ್ತಾಪಿಸಲಿಲ್ಲ? ಅವರಲ್ಲಿ ದಾಖಲೆಗಳಿದ್ದರೆ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಲಿ ಎಂದು ರವಿ ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


