ತುಮಕೂರು: ಬಳ್ಳಾರಿ ಫೈರಿಂಗ್ ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಎಸ್ಪಿಯಾಗಿ ಅಧಿಕಾರವಹಿಸಿಕೊಂಡ ಒಂದೇ ದಿನಕ್ಕೆ ಅಮಾನತ್ತು ಶಿಕ್ಷೆಗೆ ಗುರಿಯಾಗಿದ್ದ ಐಪಿಎಸ್ ಅಧಿಕಾರಿ ಪವನ್ ಸಜ್ಜನ್ ಅವರು ಮನನೊಂದು ತುಮಕೂರು ಜಿಲ್ಲೆಯಲ್ಲಿ ಆತ್ಮಹತ್ಯೆ ಯತ್ನ ನಡೆಸಿದ್ದಾರೆಂಬ ಸುಳ್ಳು ಸುದ್ದಿ ಶನಿವಾರ ವ್ಯಾಪಕವಾಗಿ ಹರಡಿತ್ತು. ಈ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ವದಂತಿ ಏನು?
ಅಮಾನತ್ತಾದ ಬಳಿಕ ಬೇಸರಗೊಂಡಿದ್ದ ಪವನ್ ಸಜ್ಜನ್ ಬಳ್ಳಾರಿಯಿಂದ ಸಿರಾ ತಾಲ್ಲೂಕಿನ ಬರಗೂರು ಅಗ್ರಹಾರದ ಖಾಸಗಿ ಫಾರಂ ಹೌಸ್‌ನಲ್ಲಿ ತಂಗಿದ್ದರು. ಈ ವೇಳೆ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನ ನಡೆಸಿದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು ಎಂದು ರಾಜ್ಯದ ಪ್ರಮುಖ ಸುದ್ದಿವಾಹಿನಿಗಳಲ್ಲಿ ಸುಳ್ಳು ಸುದ್ದಿ ಪ್ರಕಟವಾಗಿತ್ತು. ಇದರ ಬೆನ್ನಲೇ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿ ಹತ್ತಿಕೊಂಡಿತ್ತು.
ಜಿ.ಪರಮೇಶ್ವರ್ ಸ್ಪಷ್ಟನೆ:
ಈ ಕುರಿತಾಗಿ ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬಳ್ಳಾರಿ ಘಟನೆ, ಅಮಾನತ್ತು ಪ್ರಕ್ರಿಯೆಯಿಂದ ಸಹಜವಾಗಿ ಐಪಿಎಸ್ ಅಧಿಕಾರಿ ಪವನ್ ಸಜ್ಜನ್ ಬೇಸರಗೊಂಡಿದ್ದಾರೆ. ಮಾಧ್ಯಮದವರು ನೀವು ಆತ್ಮಹತ್ಯೆ ಯತ್ನ ಎನ್ನುತ್ತಿದ್ದೀರಿ. ಆದರೆ ಪವನ್ ಸಜ್ಜನ್ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಅವರು ಆರೋಗ್ಯವಾಗಿದ್ದಾರೆ. ಬೆಂಗಳೂರಿಗೆ ಮರಳುತ್ತಿದ್ದಾರೆ ಎಂಬ ಮಾಹಿತಿಯೂ ನನಗೆ ಮೇಲಾಧಿಕಾರಿಗಳಿಂದ ಬಂದಿದೆ. ಅವರು ತುಮಕೂರು ಜಿಲ್ಲೆ ಬರಗೂರಿಗೆ ಬಂದಿದ್ದಾರಾ, ಆತ್ಮಹತ್ಯೆ ಯತ್ನ ನಡೆಸಿದ್ದಾರೆ ಎಂಬುದಲ್ಲಾ ತಿಳಿದಿಲ್ಲ. ನಾನು ಅವರನ್ನು ಮಾತನಾಡಿಲ್ಲ ಎಂದರು.
ವಿಪಕ್ಷ ನಾಯಕ ಅಶೋಕ್ ಅವರೇ ಈ ಸಂಬಂಧ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮದವರು ಕೇಳಿದಾಗ ಅವರು ವಿರೋಧ ಪಕ್ಷದ ನಾಯಕರು. ಸರ್ಕಾರದಲ್ಲಿದ್ದರೆ ಎಲ್ಲಾ ಮಾಹಿತಿ ಇರುತ್ತದೆ ಎನ್ನುವ ಮೂಲಕ ಅಶೋಕ್ ಹೇಳಿಕೆಯನ್ನು ಗೃಹ ಸಚಿವರು ಅಲ್ಲಗಳೆದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


