ತುಮಕೂರು: ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮಂಜೂರಾಗಿದ್ದ 5 ಲಕ್ಷ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕೋಳಾಲ ಗ್ರಾಮ ಪಂಚಾಯತ್ ನ ಪಿಡಿಓ ಕೋಮಲ ಅವರನ್ನು ಜಿಲ್ಲಾ ಪಂಚಾಯತ್ ಸಿಇಓ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.
ಕೋಳಾಲ ಪಂಚಾಯತ್ ನ ಪಿಡಿಓ ಕೋಮಲ ಅವರು, ಅಂಗನವಾಡಿ ಕಟ್ಟಡಕ್ಕಾಗಿ ಮಂಜೂರಾದ 5 ಲಕ್ಷ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರ ನಡೆಯನ್ನು ಪ್ರಶ್ನಿಸಿ ವಕೀಲರೊಬ್ಬರು ಮಾಹಿತಿ ಕಲೆ ಹಾಕಿದಾಗ ಹಣ ಬಂದಿಲ್ಲ, ಎಂದು ಅದೂ ಇದು ಸಬೂಬು ಹೇಳಿದ್ದಾರೆ.
ಈ ಬಗ್ಗೆ ವಕೀಲರು ಮಾಹಿತಿ ಹಕ್ಕಿನಡಿಯಲ್ಲಿ ಮಾಹಿತಿ ಪಡೆದುಕೊಂಡಾಗ ಮಂಜೂರಾದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಈ ಬಗ್ಗೆ ಅಂಗನವಾಡಿ ಕಟ್ಟಡ ಕಟ್ಟಿಲ್ಲ ಎಂದು ಜಿಲ್ಲಾ ಪಂಚಾಯತ್ ಸಿಓ ಅವರ ಗಮನಕ್ಕೆ ತಂದಾಗ ಅವರು ಅವರು ತಂಡ ರಚಿಸಿ ವಿಚಾರಣೆ ನಡೆಸುತ್ತಾರೆ. ಈ ವೇಳೆ ಅವರು ಹಣ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ವಕೀಲರ ತಂಡವಾದ ಹಂದ್ರಾಳು ನಾಗಭೂಷಣ್ , ವಕೀಲರೂ ಆದ ಕಾನೂನು ತಂಡದ ಶಿವಕುಮಾರ್ ಮೇಷ್ಟ್ರು ಮನೆ, ಮಾರನಹಳ್ಳಿ ಗಣೇಶ್, ಚಿನ್ಮಯ್ ಪದ್ಮನಾಭ, ಶೇಖರ್ ಟಿ, ಮೋಹನ್ ಕುಮಾರ ಕೆ. ಅವರು ಜಿಲ್ಲಾ ಪಂಚಾಯತ್ ಸಿಇಓ ಅವರನ್ನು ಭೇಟಿಯಾಗಿ ಕೋಮಲ ವಿರುದ್ಧ ಪೊಲೀಸ್ ದೂರು ದಾಖಲಿಸುವಂತೆ ದೂರು ನೀಡುತ್ತಾರೆ.
ಈ ದೂರಿನನ್ವಯ ಪಿಡಿಓ ಅವರನ್ನು ಅಮಾನತು ಮಾಡಲಾಗಿದೆ. ಈ ಘಟನೆಯು ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆಯ ಸಂದೇಶವಾಗಿದೆ. ಸಿಇಓ ಅವರ ನಡೆಗೆ ಹಂದ್ರಾಳ್ ನಾಗಭೂಷಣ್ ಹಾಗೂ ತಂಡದವರು ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಕೋಮಲ ವಿರುದ್ಧ ಪೊಲೀಸರಿಗೆ ದೂರು ನೀಡುವ ಭರವಸೆ ಇದೆ ಎಂದು ನಮ್ಮತುಮಕೂರಿಗೆ ತಿಳಿಸಿದ್ದಾರೆ.
ವರದಿ: ಶಿವಕುಮಾರ್ ಮೇಷ್ಟ್ರುಮನೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA