ಮದುವೆಯಾಗಿ ಐದು ವರ್ಷ ಆಗಿತ್ತು. ಆರಂಭದಲ್ಲಿ ಸಂಸಾರ ಚೆನ್ನಾಗಿಯೇ ಇತ್ತು. ಬಳಿಕ ಇಬ್ಬರಲ್ಲಿಯೂ ಭಿನ್ನಾಭಿಪ್ರಾಯ ಶುರುವಾಗಿ ಪತ್ನಿಯು ಕಳೆದ ಎರಡು ವರ್ಷದಿಂದ ಗಂಡನ ಮನೆ ಬಿಟ್ಟು ಪ್ರತ್ಯೇಕವಾಗಿ ವಾಸವಾಗಿದ್ದಳು. ಈ ನಡುವೆ ಪತ್ನಿಯು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಕವನ ಮೃತ ದರ್ದೈವಿಯಾಗಿದ್ದಾಳೆ.
ಮದುವೆಯಾಗಿ ಒಂದು ಹೆಣ್ಣು ಮಗು ಇದೆ. ಈ ನಡುವೆ ಪತಿ ಪತ್ನಿ ನಡುವೆ ಮನಸ್ತಾಪ ಜಗಳ ಶುರುವಾಗಿತ್ತು. ಪತಿ ಕುಡಿದು ಬಂದು ಪದೇ ಪದೇ ಪತ್ನಿಯ ಜೊತೆ ಗಲಾಟೆ ಮಾಡುತ್ತಿದ್ದನು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸೇರಿ ಇಬ್ಬರೂ ರಿಪ್ಪನಪೇಟೆಯಲ್ಲಿ ವಾಸವಾಗಿದ್ದರು. ಇದರ ಬಳಿಕವೂ ಕಳೆದ ಎರಡು ವರ್ಷದ ಹಿಂದೆ ಪತಿ ಗಲಾಟೆ ಮಾಡಿಕೊಂಡು ಹೋಗಿದ್ದಾನೆ. ಆತ ವಾಪಸ್ ಬರಲೇ ಬಂದಿಲ್ಲ.
ಈ ಹಿನ್ನೆಲೆಯಲ್ಲಿ ಕವನಾ ಮಗಳನ್ನು ತವರು ಮನೆಗೆ ಕಳುಹಿಸಿ, ಒಬ್ಬಳೇ ಮನೆಯಲ್ಲಿ ವಾಸವಾಗಿದ್ದಳು. ರಿಪ್ಪನಪೇಟೆ ಪಟ್ಟಣದ ಸೂಪರ್ ಮಾರ್ಕೇಟ್ ನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಳು.
ಸ್ನೇಹಿತೆಯೊಬ್ಬರು ಮನೆ ಹತ್ತಿರ ಹೋಗಿ ನೋಡಿದಾಗ ಮನೆ ಬಾಗಿಲು ಓಪನ್ ಆಗಿತ್ತು. ಒಳಗೆ ನೋಡಿದ್ರೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಕವನ ಸ್ನೇಹಿತೆ ತಕ್ಷಣ ಕುಟುಂಬಸ್ಥರಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ಅವಳ ಮೊಬೈಲ್ ಮಿಸ್ಸಿಂಗ್ ಆಗಿದೆ. ಕವನ ಚೆನ್ನಾಗಿಯೇ ಇದ್ದಳು. ಯಾವುದೇ ಸಮಸ್ಯೆ ಇರಲಿಲ್ಲ. ಈ ನಡುವೆ ಹಠಾತ್ ಆಗಿ ಅವಳು ಮೃತಪಟ್ಟಿರುವುದು ಕುಟುಂಬಸ್ಥರಿಗೆ ಆತಂಕ ಮೂಡಿಸಿದೆ.


