ತುಮಕೂರು: ತಿಪಟೂರು ನಗರಸಭೆಯು ಸ್ವಚ್ಛ ಭಾರತ್ ಮಿಷನ್–2.0 ಯೋಜನೆಯಡಿ ಮಾಹಿತಿ, ಶಿಕ್ಷಣ ಮತ್ತು ಸಂವಹನ(ಐಇಸಿ) ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸ್ವಸಹಾಯ ಗುಂಪಿನ ಸದಸ್ಯರನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಿದೆ.
ಐಇಸಿ ಚಟುವಟಕೆಗಳನ್ನು ನಡೆಸಲಿಚ್ಛಿಸುವ ಸ್ವಸಹಾಯ ಗುಂಪಿನ ಆಸಕ್ತ ಸದಸ್ಯರು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಬಹುದಾಗಿದೆ. ಆಯ್ಕೆಯಾದವರಿಗೆ ಮಾಹೆಯಾನ 18,339 ರೂ.ಗಳ ಮಾಸಿಕ ಗೌರವಧನವನ್ನು ನೀಡಲಾಗುವುದು.
ಇಚ್ಛೆ ವ್ಯಕ್ತಪಡಿಸುವವರು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ–ಡೇ ಯೋಜನೆಯಡಿ ನೋಂದಾಯಿಸಿಕೊಂಡಿರಬೇಕು. ಹೆಚ್ಚಿನ ವಿವರ, ಷರತ್ತು ಮತ್ತು ನಿಯಮಗಳಿಗಾಗಿ ಜಾಲತಾಣ: http://www.tipturcity.mrc.gov.in/en/tenders ಅನ್ನು ವೀಕ್ಷಿಸಬಹುದಾಗಿದೆ.
ಆಸಕ್ತರು ಜಾಲತಾಣದಲ್ಲಿ ಅಪ್‌ಲೋಡ್ ಮಾಡಿರುವ ಷರತ್ತುಗಳನ್ವಯ ನಗರಸಭೆಯ ಇ–ಮೇಲ್ ka.tiptur.cmc@gmail.com ವಿಳಾಸಕ್ಕೆ ಅಗತ್ಯ ದಾಖಲಾತಿಗಳ ಸ್ಕ್ಯಾನ್ ಪ್ರತಿಗಳನ್ನು ಜೂನ್ 10ರೊಳಗಾಗಿ ಸಲ್ಲಿಸಬಹುದಾಗಿದೆ. ಇ–ಮೇಲ್ ಮೂಲಕ ಸಲ್ಲಿಸಿರುವ ದಾಖಲಾತಿಗಳ ಒಂದು ಪ್ರತಿಯನ್ನು ನಗರಸಭಾ ಕಚೇರಿಗೆ ತಲುಪಿಸಬೇಕು.
ಐಇಸಿ ಚಟುವಟಕೆಗಳನ್ನು ನಡೆಸಲಿಚ್ಛಿಸುವ ಸ್ವಸಹಾಯ ಗುಂಪಿನ ಸದಸ್ಯರಿಗಾಗಿ ಜೂನ್ 13ರಂದು ಸಂದರ್ಶನ ನಡೆಸಲಾಗುವುದು ಎಂದು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW