ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಚಿತ್ರದುರ್ಗದ ಮುರುಘಾ ಬೃಹನ್ಮಠದ ಡಾ. ಶಿವಮೂರ್ತಿ ಮುರಘಾ ಶರಣರಿಗೆ ಬಂಧನದ ಭೀತಿ ಎದುರಾಗಿದೆ. ಪೋಕೋ ಕಾಯ್ದೆಯಡಿ ಕೇಸ್ ದಾಖಲಾಗಿರುವುದರಿಂದ ಜಾಮೀನು ಸಿಗುವುದು ಕೂಡ ಕಷ್ಟವಾಗಲಿದೆ. ಎಫ್‌ಐಆರ್‌ನಲ್ಲಿ ಮುರುಘಾ ಮಠದ ಶ್ರೀಗಳನ್ನು A1, ಹಾಸ್ಟೆಲ್ ವಾರ್ಡನ್ ರಶ್ಮಿ A2, ಬಸವಾದಿತ್ಯ ಮರಿಸ್ವಾಮಿ A3 ಸೇರಿದಂತೆ 5 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಾರಂಭದಲ್ಲಿ ಪ್ರಭಾವಿ ಸ್ವಾಮೀಜಿಗಳ ವಿರುದ್ದ ಕೇಸ್ ದಾಖಲು ಮಾಡಲು ಅಧಿಕಾರಿಗಳು ಹಿಂದೇಟು ಹಾಕಿದ್ದರು ಎನ್ನಲಾಗಿದ್ದು, ಒಡನಾಡಿ ಸಂಸ್ಥೆಯವರು ಪ್ರಕರಣ ಸಂಬಂಧ ಡಿಸಿ ಗಮನಕ್ಕೆ ತಂದ ಬಳಿಕ ಸ್ವಾಮೀಜಿಗಳ ವಿರುದ್ದ ಕೇಸ್ ಅನ್ನು ಮಕ್ಕಳ ರಕ್ಷಣಾಧಿಕಾರಿಗಳು ನಜರ್‌ಬಾದ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ ಎನ್ನಲಾಗಿದೆ.
ಮಠದ ಉಚಿತ ಹಾಸ್ಟೆಲ್ ನಲ್ಲಿ ಇರುವ ಪ್ರೌಢಶಾಲೆಯ ಕೆಲವು ವಿದ್ಯಾರ್ಥಿನಿಯರಿಗೆ ಹಾಸ್ಟೇಲ್ ವಾರ್ಡ್‌ನ್ ಖುದ್ದು ಸ್ವಾಮಿಜಿಗಳಿಗೆ ಹೋಗಿ ಹಾಲು ನೀಡುವಂತೆ ಹೇಳುತ್ತಿದ್ದಳು ಎನ್ನಲಾಗಿದ್ದು, ಒಂದು ವೇಳೆ ಒಪ್ಪದೇ ಹೋದ್ರೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿದ್ದಳು ಎನ್ನಲಾಗಿದೆ. ಹಾಸ್ಟೆಲ್ ವಾರ್ಡ್ನ್ ಕಾಟಕ್ಕೆ ತಾಳಲಾರದೇ ಅನೇಕ ವಿದ್ಯಾರ್ಥಿನಿಯರು ಟಿಸಿ ತಗೊಂಡು ಬೇರೆ ಕಡೆ ಹೋಗಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ರಾಜ್ಯದ ಪ್ರಸಿದ್ದ ಇತಿಹಾಸ ಪ್ರಸಿದ್ದವಾದ ಸ್ವಾಮೀಜಿಗಳ ವಿರುದ್ದ ಕೇಳಿ ಬಂದಿರುವ ಕಾಮಪುರಾಣದ ಆರೋಪದ ಬಗ್ಗೆ ತನಿಖೆಯಿಂದಲೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy