ಸರಗೂರು: ತಾಲ್ಲೂಕಿನ ರಾಷ್ಟ್ರೀಯ ಹಬ್ಬದ ಆಡಳಿತ ವತಿಯಿಂದ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ 75 ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಲ್ನಡಿಗೆ ಜಾಥಾ ನಡೆಯಿತು.
ತಹಸೀಲ್ದಾರ್ ಚೆಲುವರಾಜು ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು.
ಬಳಿಕ ತಹಸೀಲ್ದಾರ್ ಚೆಲುವರಾಜು ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ಮೂರು ದಿನಗಳ ಕಾಲ ಪ್ರತಿ ಮನೆ ಮನೆಗೂ ತ್ರಿವರ್ಣ ಧ್ವಜವನ್ನು ಹಾರಿಸಬೇಕು ಎಂದರು.
ಜಾಥಾದಲ್ಲಿ ತಾಲ್ಲೂಕಿನ ಅಧಿಕಾರಿಗಳು, ಪಟ್ಟಣದ ಎಲ್ಲಾ ಶಾಲೆಯ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ತಹಸೀಲ್ದಾರ್ ಚೆಲುವರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಷ್ಮಾ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್.ಕಬಿನಿ ಉಪಾವಿಭಾಗ ನೀರಾವರಿ ಇಲಾಖೆ ಅಧಿಕಾರಿ ಉಷಾ.ಪಪಂ ಮುಖ್ಯಾಧಿಕಾರಿ ಬಿ.ಜಿ. ಸತೀಶ್, ಕೃಷಿ ಇಲಾಖೆ ಅಧಿಕಾರಿ ಮಹೇಶ್ ಕುಮಾರ್, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಮಲ್ಲೇಶ್, ಪಪಂ ಸದಸ್ಯರು ಎಸ್ ಎಲ್ ರಾಜಣ್ಣ, ಶ್ರೀನಿವಾಸ್, ಹೇಮವತಿರಮೇಶ್, ವಿರೇಶ್, ದಿವ್ಯನವೀನ್, ಚೈತ್ರಸ್ವಾಮಿ, ಉಮಾರಾಮಚಂದ್ರ, ಚಲುವಕೃಷ್ಣ, ಉಪತಹಸೀಲ್ದಾರ್ ಸುನೀಲ್, ಶೀರಸ್ತೇದಾರ್ ಹರೀಶ್, ಗುರುರಾಜು, .ಆರ್ ಐ ಮುಜೀಬ್, ಮುಖಂಡರು ಪುಟ್ಟ ಹನುಮಯ್ಯ, ನಾಗರಾಜು, ಶ್ರೀನಾಥ್, ಎಲ್ಲಾ ತಾಲ್ಲೂಕಿನ ಅಧಿಕಾರಿಗಳು ಹಾಗೂ ಶಾಲೆಯ ಮುಖ್ಯ ಶಿಕ್ಷಕರು, ಶಾಲೆಯ ಮಕ್ಕಳು ಮತ್ತು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಅಭಿಯಾನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz