ನವದೆಹಲಿ : ಸ್ವತಂತ್ರ ಭಾರತದ ಮೊದಲ ಮತದಾರ ಶ್ಯಾಮ್ ಸರನ್ ನೇಗಿ (106) ಇಂದು ವಿಧಿವಶರಾಗಿದ್ದಾರೆ. ಇದೇ ತಿಂಗಳು 2 ರಂದು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ತಮ್ಮ ಮನೆಯಿಂದ ಕೊನೆಯ ಮತ ಚಲಾಯಿಸಿದ್ದರು.
ಹಿಮಾಚಲ ಪ್ರದೇಶದ ಕಿನ್ನೌರ್ ನಿವಾಸಿ ನೇಗಿಗೆ 106 ವರ್ಷ ವಯಸ್ಸಾಗಿತ್ತು. ನವೆಂಬರ್ 2ರಂದು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಅವರು ತಮ್ಮ ಮನೆಯಿಂದ ಕೊನೆಯ ಮತ ಚಲಾಯಿಸಿದ್ದರು.
ಮತ ಚಲಾಯಿಸಿದ ನಂತರ ಮಾತನಾಡಿದ ಶ್ಯಾಮ್ ಸರನ್, ಮತದಾನ ಪ್ರಜಾಪ್ರಭುತ್ವದ ಮಹಾನ್ ಹಬ್ಬ ಎಂದು ಹೇಳಿದ್ದರು. ನಾವೆಲ್ಲರೂ ನಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂದಿದ್ದರು.
ಜುಲೈ 1, 1917ರಲ್ಲಿ ಜನಿಸಿದ್ದ ನೇಗಿ ಅವರು ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ಬಳಿಕ 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಆದರೆ ಹಿಮಾಚಲ ಪ್ರದೇಶದಲ್ಲಿ ಹವಾಮಾನದ ಕಾರಣಕ್ಕೆ ಐದು ತಿಂಗಳ ಮುಂಚಿತವಾಗಿಯೇ ಮತದಾನ ನಡೆದಿದ್ದು, ಈ ವೇಳೆ ಮೊತ್ತ ಮೊದಲಿಗರಾಗಿ ಶ್ಯಾಮ್ ಸರಣ್ ನೇಗಿ ತಮ್ಮ ಮತ ಚಲಾಯಿಸಿದ್ದರು.
ಡಿಸಿ ಕಿನ್ನೌರ್ ಅಬಿದ್ ಹುಸೇನ್ ಅವರು ಜಿಲ್ಲಾಡಳಿತವು ಅತ್ಯಂತ ಹಳೆಯ ಮತದಾರನ ಅಂತಿಮ ವಿಧಿವಿಧಾನಗಳಿಗೆ ವ್ಯವಸ್ಥೆ ಮಾಡುತ್ತಿದೆ. ಅವರನ್ನು ಗೌರವಯುತವಾಗಿ ಕಳುಹಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy