ಉಕ್ರೇನ್ – ರಷ್ಯಾ ಯುದ್ದದ ನಡುವೆ ಎರಡೂವರೆ ವರ್ಷದ ಜಾಕ್ ರಸ್ಸೆಲ್ ಶ್ವಾನ ೨೦೦ಕ್ಕೂ ಹೆಚ್ಚು ಸ್ಫೋಟಕಗಳನ್ನು ಪತ್ತೆಹಚ್ಚಿ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ಪದಕಕ್ಕೆ ಭಾಜನವಾಗಿದೆ.
ರಷ್ಯಾದ ಆಕ್ರಮಣದ ನಂತರ ಶ್ವಾನದ ಸಮರ್ಪಿತ ಸೇವೆಯನ್ನು ಗುರುತಿಸಲು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಪದಕವನ್ನು ಪ್ರದಾನಿಸಿದರು.
ಈ ನಾಯಿ ೨೦೦ಕ್ಕೂ ಹೆಚ್ಚು ಸ್ಫೋಟಕಗಳನ್ನು ಪತ್ತೆಹಚ್ಚಿದ ಕೀರ್ತಿಗೆ ಪಾತ್ರವಾಗಿದೆ. ಯುದ್ಧದ ಪ್ರಾರಂಭದಿಂದಲೂ ಅವುಗಳ ಸ್ಫೋಟವನ್ನು ತಡೆದಿದ್ದು, ಇದು ರಷ್ಯಾದ ವಿರುದ್ಧ ಉಕ್ರೇನಿಯನ್ ಪ್ರತಿರೋಧದ ಸಂಕೇತವಾಗಿದೆ ಎಂದು ಬಣ್ಣಿಸಲಾಗಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy