ವೆಸ್ಟ್ ಇಂಡೀಸ್ ನ ಬಾರ್ಬಡೋಸ್ ಮೈದಾನದಲ್ಲಿ ನಡೆದ ಟಿ 20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ T20 WC-2024ನ್ನು ಭಾರತ ತನ್ನದಾಗಿಸಿಕೊಂಡಿದೆ. ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಸೋಲಿಸಿದೆ.
ನಿನ್ನೆ ಬ್ರಿಡ್ಜ್ ಟೌನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತದ ಬ್ಯಾಟಿಂಗ್ ಮಶೀನ್ ವಿರಾಟ್ ಕೊಹ್ಲಿ 76 ರನ್ ಹಾಗೂ ಅಕ್ಷರ್ ಪಟೇಲ್ 47 ರನ್ ಗಳ ನೆರವಿನಿಂದ 176 ರನ್ ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಷ್ಟೇ ಶಕ್ತವಾಗಿದ್ದು 7 ರನ್ ಗಳಿಂದ ವಿರೋಚಿತ ಸೋಲು ಕಂಡಿದೆ.
ಭಾರತ 20 ಓವರ್‌ಗಳಲ್ಲಿ ಟೀಂ ಇಂಡಿಯಾ 7 ವಿಕೆಟ್ ಕಳೆದುಕೊಂಡು 176 ರನ್ ಗಳಿಂದ ದಕ್ಷಿಣ ಆಫ್ರಿಕಾಗೆ ಸಾದಾರಣ ಅನ್ನುವ ಸವಾಲ್ ನೀಡಿತ್ತು. ಈ ಸವಾಲನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಕೊನೆಗೆ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಲಷ್ಟೇ ಸಾಧ್ಯವಾಯಿತು. ದಕ್ಷಿಣ ಆಫ್ರಿಕ್ರಾ ಸೋಲೊಪ್ಪಿಕೊಂಡು ಶರಣಾದ ಕ್ಷಣ ಭಾರತದ ಪಾಲಿನ ಅದ್ಭುತ ನಿಮಿಷಗಳಾಗಿ ಬದಲಾಗಿತ್ತು. ಬರೋಬ್ಬರಿ 17 ವರ್ಷಗಳ ಬಳಿಕ ಟೀಮ್ ಇಂಡಿಯಾ T20 ವಿಶ್ವಕಪ್ ತನ್ನದಾಗಿಸಿಕೊಂಡಿತು. ಟೂರ್ನಿಯಲ್ಲಿ ಗೆಲುವನ್ನು ಚೇಸ್ ಮಾಡುತ್ತಲೆ ಆಡಿದ್ದ ದಕ್ಷಿಣ ಆಫ್ರಿಕಾ ಫೈನಲ್ ನಲ್ಲಿ ತೀವ್ರ ನಿರಾಸೆ ಅನುಭವಿಸಿದೆ.
ದಕ್ಷಿಣ ಆಫ್ರಿಕಾ ಪರ ಹೆಂಡ್ರಿಕ್ಸ್ 4 ರನ್ ಗಳಿಸಿ ಬೇಗನೆ ಔಟಾದರೆ ಮಾರ್ಕ್ರಾಮ್ ಕೂಡಾ 4 ರನ್ ಗಳಿಸಿ ಔಟಾದರು. ನಂತರ ಬಂದ ಸ್ಟಬ್ಸ್ ಉತ್ತಮ ಬ್ಯಾಟಿಂಗ್ ಮಾಡಿದ್ದು 31 ರನ್ ಬಾರಿಸಿ ಅಕ್ಷರ್ ಪಟೇಲ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಡಿಕಾಕ್ ಅನ್ನು 39 ರನ್ ಗಳಿಸಿದ್ದಾಗ ಅರ್ಷ ದೀಪ್ ಉರುಳಿಸಿದರು. ಈ ವೇಳೆ ಸ್ಫೋಟಕ ಬ್ಯಾಟಿಂಗ್ ಮಾಡಿದ ಕ್ಲಾಸೆನ್ 52 ರನ್ ಸಿಡಿಸಿ ತಂಡವನ್ನು ಇನ್ನೇನು ಗೆಲುವಿನ ಸನಿಹಕ್ಕೆ ತಂದಿಟ್ಟರು ಅನ್ನುವಷ್ಟರಲ್ಲಿ ಪಂದ್ಯ ಭಾರತದ ಪಾಲಾಗಿದೆ. ಭಾರತದ ಪರ ಹಾರ್ದಿಕ್ ಪಾಂಡ್ಯ 3, ಅರ್ಷ್ ದೀಪ್ ಸಿಂಗ್ಮತ್ತು ಜಸ್ ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದರೆ ಅಕ್ಷರ್ ಪಟೇಲ್ 1 ವಿಕೆಟ್ ಪಡೆದಿದ್ದಾರೆ.
ಪಂದ್ಯದ ಮೊದಲ ಓವರ್ ನಲ್ಲಿಯೇ 15 ರನ್ ಗಳ ಭರ್ಜರಿ ಆರಂಭ ಪಡೆದರೂ ಭಾರತಕ್ಕೆ ಎರಡನೇ ಓವರ್ ನಲ್ಲಿ ಕೇಶವ್ ಮಹಾರಾಜ್ ಆಘಾತ ನೀಡಿದರು. ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮಹಾರಾಜ್ ಒಂದೇ ಓವರ್ ನಲ್ಲಿ 9 ರನ್ ಗಳಿಸಿದ್ದ ರೋಹಿತ್ ಶರ್ಮಾ ಜತೆಗೆ ರಿಷಬ್ ಪಂತ್ ರನ್ನು ಶೂನ್ಯಕ್ಕೆ ಔಟ್ ಮಾಡಿ ಪೆವಿಲಿಯನ್ಗೆ ಕಳಿಸಿದರು. ನಂತರ ತಾಳ್ಮೆಯ ಆಟವಾಡಿದ ಕೊಹ್ಲಿ ಹಾಗೂ ಅಕ್ಷರ್ ಪಟೇಲ್ 106 ರನ್ ಗಳ ಜೊತೆಯಾಟ ನೀಡಿದರು. 47 ರನ್ ಗಳಿಸಿದ್ದ ಅಕ್ಷರ್ ಪಟೇಲ್ ರನ್ ಔಟ್ ಗೆ ಬಲಿಯಾದರು. ನಂತರ ಬಂದ ಶಿವಂ ದುಬೆ 27 ರನ್ ಗಳಿಸಿ ಔಟಾದರು. ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್ ಮತ್ತು ನಾರ್ಟ್ಜೆ ತಲಾ 2 ವಿಕೆಟ್ ಪಡೆದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA