ಸಿನಿಮಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಘಟನೆ ಸ್ಫೋಟಕ ಮಾಹಿತಿಗಳು ಒಂದೊಂದಾಗಿ ಬಯಲಾಗುತ್ತಿದೆ. ಇದೀಗ ಭಾರತದ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಿತ್ರಗಳ ಮೂಲಕ ಹೆಸರು ಮಾಡಿರುವ ನಟಿ ಸಾಯಿ ತಮ್ಹಂಕರ್ ಕಾಸ್ಟಿಂಗ್ ಕೌಚ್ ಘಟನೆ ಬಿಚ್ಚಿಟ್ಟಿದ್ದಾರೆ.
ಮರಾಠಿ ಚಿತ್ರಗಳಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ಸಾಯಿ ತಮ್ಹಂಕರ್ ತಮ್ಮ ಸಿನಿ ಕರಿಯರ್ ನಲ್ಲಿ ನಡೆದ ಘಟನೆ ಹೇಳಿದ್ದಾರೆ. ಒಂದು ದಿನ ನನಗೆ ಫೋನ್ ಕರೆ ಬಂದಿತ್ತು. ನಿರ್ದೇಶಕ, ನಿರ್ಮಾಪಕರ ಜೊತೆಗೆ ಗುರುತಿಸಿಕೊಂಡಿದ್ದ ಆ ವ್ಯಕ್ತಿ, ಸಿನಿಮಾ ಕುರಿತು ಮಾತನಾಡಲು ಫೋನ್ ಮಾಡಿದ್ದರು. ಒಂದು ಉತ್ತಮ ಚಿತ್ರವಿದೆ. ನೀವೇ ನಾಯಕಿ ಎಂದು ನಿರ್ಮಾಪಕರು, ನಿರ್ದೇಶಕರು ಒಪ್ಪಿದ್ದಾರೆ. ಈ ಪಾತ್ರ ನೀವು ಮಾಡಿದರೆ ಮಾತ್ರ ತುಂಬಾ ಉತ್ತಮ ಎಂದಿದ್ದಾರೆ.
ಈ ಚಿತ್ರಕ್ಕೆ ನೀವು ನಾಯಕಿ, ಆದರೆ ನೀವು ನಿರ್ಮಾಪಕ ಹಾಗೂ ನಿರ್ದೇಶಕರ ಜೊತೆ ಮಲಗಬೇಕು. ನೀವಾಗಿರುವ ಕಾರಣ ನಾನು ಹೀರೋ ಜೊತೆ ಮಲಗಿ ಎಂದು ಹೇಳಲ್ಲ. ಸಾಮಾನ್ಯವಾಗಿ ಹೀರೋ ಜೊತೆಗೂ ಮಲಬೇಕು. ಆದರೆ ನೀವು ನಿರ್ಮಾಪಕ ಹಾಗೂ ನಿರ್ದೇಶಕರ ಜೊತೆ ಒಂದು ಸಾರಿ ಎಂದು ವ್ಯಕ್ತಿ ಹೇಳಿದ್ದಾನೆ.
ಆತನ ಮಾತುಗಳು ನನಗೆ ಆಘಾತ ತಂದಿತ್ತು. ಇಷ್ಟೇ ಅಲ್ಲ ನನ್ನನ್ನು ಕೆರಳಿಸಿತ್ತು. ನೀವು ಯಾಕೆ ನಿಮ್ಮ ತಾಯಿಯನ್ನು ಮಲಗಲು ಕಳುಹಿಸಬಾರದು ಎಂದು ನಾನು ಮರು ಪ್ರಶ್ನಿಸಿದೆ. ನನ್ನ ಮಾತಿಗೆ ಆತನ ಬಳಿ ಉತ್ತರ ಇರಲಿಲ್ಲ. ಮತ್ತೆ ಮಾತು ಆರಂಭಿಸುವ ಮೊದಲೇ ನಾನು ಹೇಳಿದೆ, ನನಗೆ ಯಾಕೆ ಕಾಲ್ ಮಾಡಿದೆ ಎಂದು ನಿನಗೆ ಅನಿಸುತ್ತಿರಬಹುದು, ಇನ್ನೊಂದು ಸಾರಿ ಈ ರೀತಿ ಹೇಳಿ ಕಾಲ್ ಮಾಡಿದರೆ ನೆಟ್ಟಗಿರಲ್ಲ ಎಂದು ಫೋನ್ ಕಟ್ ಮಾಡಿದೆ. ಬಳಿಕ ನನಗೆ ಫೋನ್ ಕಾಲ್ ಬರಲಿಲ್ಲ ಎಂದು ಸಾಯಿ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA