ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಅದರಲ್ಲಿ ಉದಾಹರಿಸಬಹುದಾದ ಅಥವಾ ನವೀನತೆಯಿಂದ ಕೂಡಿದ ವಿಶೇಷಗಳೇನೂ ಕಾಣಿಸಲಿಲ್ಲ. ಬಹುತೇಕ ವಿಧಾನ ಸಭೆಯ ಸದಸ್ಯರು, ಕಳೆದ ಬಾರಿ ಸೋತವರಿಗೆ ಟಿಕೆಟ್ ನೀಡಲಾಗಿದೆ.
ಒಂದೆರಡು ಕ್ಷೇತ್ರಗಳನ್ನು ಇಲ್ಲಿ ಉಲ್ಲೇಖಿಸಲೇಬೇಕು. ಅವುಗಳೆಂದರೇ ವರುಣಾ ಮತ್ತು ಟಿ. ನರಸೀಪುರ ಕ್ಷೇತ್ರಗಳು. ಈ ಎರಡೂ ಕ್ಷೇತ್ರಗಳಲ್ಲಿ ಪುತ್ರರು ತಮ್ಮ ತಮ್ಮ ತಂದೆಯವರ ರಾಜಕೀಯ ಭವಿಷ್ಯಕ್ಕೆ ತಮ್ಮ ರಾಜಕೀಯ ಭವಿಷ್ಯವನ್ನು ಬದಿಗಿಟ್ಟಿದ್ದಾರೆ.
ಇನ್ನು ಟಿ.ನರಸೀಪುರದಲ್ಲಿ ಸ್ಪರ್ಧಿಸಿ ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸುವ ಕನಸು ಕಂಡಿದ್ದ ಸುನೀಲ ಬೊಸ್ ಕನಸು ಭಗ್ನವಾಗಿದೆ. ಅವರೂ ಸಹ ತಮ್ಮ ತಂದೆಗಾಗಿ ಕ್ಷೇತ್ರವನ್ನು ತ್ಯಾಗ ಮಾಡುವಂತಾಗಿದೆ. ಅವರ ತಂದೆ ಹೆಚ್ ಸಿ ಮಹದೇವಪ್ಪ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದರು. ದುರಾದೃಷ್ಟವಶಾತ್ ಆರ್. ಧ್ರುವ ನಾರಾಯಣ್ ನಿಧನದಿಂದ ಅವರ ಪುತ್ರ ದರ್ಶನ್ ಗೆ ಆ ಕ್ಷೇತ್ರ ಬಿಡಬೇಕಾಯಿತು.
ಸಿದ್ದರಾಮಯ್ಯನವರು ಮತ್ತೊಂದು ಕ್ಷೇತ್ರದಲ್ಲಿ ಸೆಣಸಲು ಅಣಿಯಾಗಿದ್ದಾರೆ. ತಮ್ಮ ಮಗ ಬಿಟ್ಟುಕೊಟ್ಟ ಕ್ಷೇತ್ರವನ್ನು ಮರಳಿ ನೀಡುವ ಉದ್ದೇಶವೂ ಇದರಲ್ಲಿ ಅಡಗಿದೆ. ಆದರೆ ಅವರು ಎರಡೂ ಕ್ಷೇತ್ರಗಳಲ್ಲೂ ಗೆಲ್ಲಲೇಬೇಕು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


