ಬೆಂಗಳೂರು: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿ ದೇಶಕ್ಕೆ ಕೀರ್ತಿ ತಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಟಾಟಾ ಮೋಟಾರ್ಸ್ ಸಂಸ್ಥೆಯು ಹೊಚ್ಚ ಹೊಸ ‘ಟಾಟಾ ಸಿಯೆರಾ’ (Tata Sierra) ಕಾರನ್ನು ಉಡುಗೊರೆಯಾಗಿ ನೀಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತೀಯ ವನಿತೆಯರ ಸಾಧನೆಯನ್ನು ಗೌರವಿಸಲು ಟಾಟಾ ಸಮೂಹ ಈ ನಿರ್ಧಾರ ಕೈಗೊಂಡಿದೆ. ಇತ್ತೀಚೆಗೆ ನಡೆದ ವಿಶೇಷ ಸಮಾರಂಭದಲ್ಲಿ ಟಾಟಾ ಸನ್ಸ್ ಮತ್ತು ಟಾಟಾ ಮೋಟಾರ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಆಟಗಾರ್ತಿಯರಿಗೆ ಕಾರಿನ ಕೀ ಹಸ್ತಾಂತರಿಸಿದರು.
ವಿಶೇಷತೆಗಳು: ಟಾಟಾ ಮೋಟಾರ್ಸ್ ಕೇವಲ ಕಾರನ್ನು ನೀಡುವುದಲ್ಲದೆ, ಆಟಗಾರ್ತಿಯರ ಇಷ್ಟದ ಬಣ್ಣದ ಕಾರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನೂ ನೀಡಿತ್ತು. ಉಡುಗೊರೆಯಾಗಿ ನೀಡಲಾದ ‘ಟಾಟಾ ಸಿಯೆರಾ’ ಟಾಪ್ ಎಂಡ್ ಮಾಡೆಲ್ ಕಾರಿನ ಎಕ್ಸ್ ಶೋ ರೂಂ ಬೆಲೆ ಸುಮಾರು 21.29 ಲಕ್ಷ ರೂಪಾಯಿಗಳಾಗಿದ್ದು, ಆನ್ ರೋಡ್ ಬೆಲೆ ಅಂದಾಜು 25 ಲಕ್ಷ ರೂಪಾಯಿಗಳಾಗಿದೆ. ಸಿಯೆರಾ ಕಾರು ತನ್ನ ಅತ್ಯಾಧುನಿಕ ವಿನ್ಯಾಸ ಮತ್ತು ಸುರಕ್ಷತಾ ಫೀಚರ್ ಗಳಿಗೆ ಹೆಸರುವಾಸಿಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


