ಆಂಧ್ರ ಪ್ರದೇಶ ವಿಧಾನ ಸಭೆ, ಲೋಕಸಭಾ ಚುನಾವಣೆಯಲ್ಲಿ ಚಂದ್ರ ಬಾಬು ನಾಯ್ಡು ನೇತೃತ್ವದ ‘ತೆಲುಗು ದೇಶಂ ಪಕ್ಷ’ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಚಂದ್ರ ಬಾಬು ನಾಯ್ಡು ಆಸ್ತಿ ಮೌಲ್ಯ ಒಂದೇ ವಾರಕ್ಕೆ 870 ಕೋಟಿ ರೂ. ಹೆಚ್ಚಳವಾಗಿದೆ.
ನಾಯ್ಡು ಕುಟುಂಬಸ್ಥರು ಪ್ರವರ್ತಕರಾಗಿರುವ ಹಾಗೂ ಷೇರುಗಳನ್ನು ಹೊಂದಿರುವ ಹೆರಿಟೇಜ್ ಫಂಡ್ಸ್ ಕಂಪೆನಿಯ ಷೇರು ಮೌಲ್ಯ ಜೂ.3ರಂದು 424 ರೂ.ಗಳಿತ್ತು. ಶುಕ್ರವಾರ ಅದು 661.25 ರೂ.ಗೆ ಏರಿದೆ. ಹೀಗಾಗಿ ಜೂ.3ರಂದು 3,700 ಕೋಟಿ ರೂ.ಗಳಿದ್ದ ಕಂಪೆನಿಯ ಮಾರುಕಟ್ಟೆ ಬಂಡವಾಳ ಜೂ.7ಕ್ಕೆ 6,136 ಕೋಟಿ ರೂ.ಗೆ ಏರಿದೆ. ಈ ಮೂಲಕ ನಾಯ್ಡು ಕುಟುಂಬದ ನಿವ್ವಳ ಆಸ್ತಿ ಮೌಲ್ಯವೂ 870 ಕೋಟಿ ರೂ. ಏರಿ, 2,190 ಕೋಟಿ ರೂ.ಗೆ ತಲುಪಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ಮತ್ತು ಪವನ್ ಕಲ್ಯಾಣ್ ಜನ ಸೇನಾದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಟಿಡಿಪಿ ಸ್ಪಷ್ಟ ಬಹುಮತ ಸಾಧಿಸಿತ್ತು. ಮಾತ್ರವಲ್ಲ ಲೋಕ ಸಭಾ ಚುನಾವಣೆಯಲ್ಲೂ ಭರ್ಜರಿ ಬೇಟೆಯಾಡುವುದರ ಮೂಲಕ ಬಿಜೆಪಿ ನೇತೃತ್ವದ ಎನ್ ಡಿಎ ಅಧಿಕಾರ ಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA