ಬೀದರ್: ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಚೌಧರಿ ಗ್ರಾಮದ ಸರಕಾರಿ ಪ್ರೌಢ ಶಾಲೆ ಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ವಿದ್ಯಾರ್ಥಿಗಳು ಶಿಕ್ಷಕರಿಗೆ ಹೂಗುಚ್ಚ ಶಾಲು ಹಾಕಿ ಸನ್ಮಾನ ಮಾಡಿದರು. ಶಾಲೆಯ ಮಕ್ಕಳೆಲ್ಲಾ ಕೂಡಿ ಕೇಕ್ ಕತ್ತರಿಸುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಿದರು.
ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಎಮ್.ಡಿ.ನಯೂಮ್ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಹಾಗೂ ಸುಂದರ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಒಬ್ಬ ಶಿಲ್ಪಿ ಒಂದು ಕಲ್ಲು ಕೆತ್ತಿ ಮೂರ್ತಿ ಮಾಡಿದ ಹಾಗೆ. ಅಜ್ಞಾನ ಮಗುವಿಗೆ ತಿದ್ದಿ ತೀಡಿ ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಿ ಬದಲಾಯಿಸುವುದು ಅದು ಶಿಕ್ಷಕರು ಮಾತ್ರ ಎಂದು ತಿಳಿಸಿದರು.
ಶಿಕ್ಷಕರ ದಿನಾಚರಣೆ ನಿಮಿತ್ಯ ಶಾಲೆಯ ಮುಖ್ಯ ಗುರುಗಳಿಗೂ ಶಿಕ್ಷಕರಿಗೆ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಎಮ್.ಡಿ.ನಯೂಮ್ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಉಮಾಕಾಂತ ಚೊಪಡೇ, ನವನಾಥ ವಡಗಾವೇ, ರಂಜನಾ ಗೈಕವಾಡ, ಜೀವನ ಬೇಂದ್ರೆ, ರವಿ, ಸಂಜೀವ ಶಿಕ್ಷಕರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ದೇವಿದಾಸ ಮಾಳಗೆ ಪ್ರಭಾಕರ ಇಂಗಳೆ, ರಾಜು ಹಚ್ಕ್ಮಟೆ, ಅಲ್ಲವುದಿನ ಹಾಗೂ ಶಾಲೆಯ ಮಕ್ಕಳು ಇದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q