ಬೆಂಗಳೂರು: 27 ವರ್ಷದ ಟೆಕ್ಕಿಯೊಬ್ಬ ಸಿಗರೇಟ್ ಸೇದುವ ವೇಳೆ ಬಾಲ್ಕನಿಯಿಂದ ಬಿದ್ದು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 33ನೇ ಮಹಡಿಯ ಬಾಲ್ಕನಿಯಿಂದ ಯುವಕ ಬಿದ್ದಿದ್ದಾನೆ ಎಂದು ಹೇಳಲಾಗುತ್ತಿದೆ.
ಮೃತನನ್ನು ದಿಪಾಂಶು ಶರ್ಮಾ ಎಂದು ಗುರುತಿಸಲಾಗಿದೆ. ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ದಿಪಾಂಶು ಶರ್ಮಾ, ಇಬ್ಬರು ಯುವತಿಯರು ಹಾಗೂ ಓರ್ವ ಸ್ನೇಹಿತ ಸೇರಿ ಪಾರ್ಟಿ ಮಾಡಿದ್ದರು. ಪಾರ್ಟಿ ವೇಳೆ ಕಂಠಪೂರ್ತಿ ಕುಡಿದು ಗಾಂಜಾ ಸೇವನೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಮೃತ ಟೆಕ್ಕಿಯು ಆರ್ಮಿ ಸಿಬ್ಬಂದಿಯ ಮಗನಾಗಿದ್ದು, ಉತ್ತರ ಪ್ರದೇಶ ಮೂಲದವನಾಗಿದ್ದಾನೆ. ಪಿಜಿಯಲ್ಲಿ ವಾಸವಾಗಿದ್ದು ಮೊನ್ನೆ ರಾತ್ರಿ ಸ್ನೇಹಿತರ ಮನೆಯಲ್ಲಿ ಪಾರ್ಟಿಗೆಂದು ಹೋಗಿದ್ದ ಎಂದು ತಿಳಿದು ಬಂದಿದೆ.


