ಗೃಹ ಸಚಿವರ ಸ್ವಕ್ಷೇತ್ರದಲ್ಲಿ ಮಧ್ಯವರ್ತಿಗಳಿಗೆ ಬ್ರೇಕ್ ಹಾಕಲು ಕೊರಟಗೆರೆ ತಹಶೀಲ್ದಾರ್ ಹೊಸ ಪ್ಲಾನ್ ಮಾಡಿದ್ದು, ತಮ್ಮ ಕಚೇರಿಯ ಬಾಗಿಲಲ್ಲೇ ಕುಳಿತು ಸಾರ್ವಜನಿಕರ ಕುಂದುಕೊರತೆ ಪರಿಶೀಲನೆ ನಡೆಸಿದ್ದಾರೆ.
ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ಆಗಬೇಕು ಅಂದ್ರೆ, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿತ್ತು ಇದರಿಂದ ಎಚ್ಚೆತ್ತ ತಹಶೀಲ್ದಾರ್ ಮುನಿಶಾಮಿರೆಡ್ಡಿ ಇದೀಗ ತಮ್ಮ ಕಚೇರಿಯ ಬಾಗಿಲಲ್ಲೇ ಚೇರ್ ಹಾಕಿ ಕುಳಿತು ಸಾರ್ವಜನಿಕರ ಕುಂದುಕೊರತೆ ಪರಿಶೀಲನೆ ನಡೆಸುವ ಮೂಲಕ ಮಧ್ಯವರ್ತಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕ್ಷೇತ್ರವಾಗಿರುವ ಕೊರಟಗೆರೆ ತಾಲೂಕಿನ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಅವರ ಈ ವಿನೂತನ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


