ತಿಪಟೂರು: ಶತ್ರುಗಳು ಇರಬೇಕು, ಆದರೆ ಹಿತಶತ್ರುಗಳು ಹೇಗೆ ಇರಬಾರದೋ ಅದೇ ರೀತಿ ಜೆ.ಡಿ.ಎಸ್.ನಲ್ಲಿ ಅಧಿಕಾರ ಅನುಭವಿಸಿದ ಕೆಲವು ಜಳ್ಳುಗಳು ಉದುರಿದರೇನು ಚಿಂತೆಯಿಲ್ಲ, ಗಟ್ಟಿಕಾಳುಗಳಿಂದ ಜೆ.ಡಿ.ಎಸ್ ಬಲಿಷ್ಟವಾಗುತ್ತಿದೆ ಎಂದು ಜೆ.ಡಿ.ಎಸ್ ಅಭ್ಯರ್ಥಿ ಕೆ.ಟಿ.ಶಾಂತಕುಮಾರ್ ತಿಳಿಸಿದರು.
ನಗರದ ಗೃಹಕಛೇರಿಯಲ್ಲಿ ಗಂಗಾವತರಣದ ಪ್ರಯುಕ್ತ ಗಂಗಾಮಾತೆ ಹಾಗೂ ಭಗೀರಥನ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರಿಂದು, ಗಂಗಾವತರಣ ದಿನವಾಗಿದೆ ಇಂದಿನಿಂದ ಜೆ.ಡಿ.ಎಸ್. ಪಕ್ಷ ಗಂಗೆಯಂತೆ ಪಾವಿತ್ರ್ಯಯತೆಯನ್ನು ಉಂಟುಮಾಡಿದೆ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಜೆ.ಡಿ.ಎಸ್. ನಿಂದ ಗೆದ್ದ ಅಭ್ಯರ್ಥಿ ಪಕ್ಷದಿಂದ ಸ್ಥಾನಮಾನಗಳನ್ನು ಅನುಭವಿಸಿ ಇಂದು ಪಕ್ಷ ಬಿಟ್ಟಿರುವುದು ಒಂದು ರೀತಿಯ ಸಂತಸವಾಗಿದೆ. ಏಕೆಂದರೆ ಪಕ್ಷದಲ್ಲಿದ್ದುಕೊಂಡೇ ಹಿತಶತ್ರುಗಳಾಗುವ ಬದಲು ಇಂದು ಪಕ್ಷವನ್ನು ಬಿಟ್ಟಿರುವುದರಿಂದ ನಾವು ಧೈರ್ಯವಾಗಿ ಎದುರಿಸಬಹುದು ಎಂದು ಮಾಜಿ ಜಿ.ಪಂ ಸದಸ್ಯ ರಾಧಾ ನಾರಾಯಣಗೌಡರಿಗೆ ಟಾಮಗ್ ನೀಡಿದರು.
ಇನ್ನೊಂದೆಡೆ ನನಗೆ ಜೆ.ಡಿ.ಎಸ್. ಪಕ್ಷದ ಟಿಕೆಟ್ ತಪ್ಪಿಸಬೇಕೆಂದು ಹಲವಾರು ಜನರು ಪ್ರಯತ್ನಪಟ್ಟರೂ, ಕುಮಾರಸ್ವಾಮಿ ನನ್ನ ಮೇಲೆ ಭರವಸೆಯಿಟ್ಟು ಟಿಕೆಟ್ ನೀಡಿದ್ದಾರೆ.
ಇದರಿಂದಲೇ ಜೆ.ಡಿ.ಎಸ್. ಎಷ್ಟು ಗಟ್ಟಿಯಾಗಿದೆ ಎಂಬುದು ತಿಳಿಯುತ್ತದೆ. ಇನ್ನು ಶಾಂತಕುಮಾರ್ ಅಲೆಯಿಂದ ಎಲ್ಲಿ ನಾವು ಸೋಲುತ್ತೇವೋ ಎಂಬ ಭಯದಿಂದ ಇಲ್ಲದ ಅಪಪ್ರಚಾರಮಾಡುತ್ತಿದ್ದು ಇದು ಜೆ.ಡಿ.ಎಸ್ ಗೆಲ್ಲಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಬಿ.ಜೆ.ಪಿ ಸರ್ಕಾರ ಜಲಜೀವನ್ ಮಿಷನ್ ಹೆಸರಿನಲ್ಲಿ ಮನೆಮನೆಗೆ ನೀರು ಎಂದು ಬಡಜನರ ಮನೆಬಾಗಿಲಿಗೆ ನಮ್ಮ ಕೆರೆಯ ನೀರನ್ನೇ ಕೊಟ್ಟು ಅದಕ್ಕೆ ಮೀಟರ್ ಅಳವಡಿಸಿ ನಮ್ಮ ನೀರಿಗೆ ನಾವೇ ತೆರಿಗೆ ಕಟ್ಟುವುದು ಮಾಡಿದೆ. ಈ ಬಾರಿಯು ಚುನಾವಣೆಯಲ್ಲಿ ಗೆಲ್ಲುತ್ತೇನೆ, ತಾಲ್ಲೂಕಿಗೆ ಶಾಶ್ವತ ನೀರಾವರಿ ಯೋಜನೆಗಳನ್ನು ತಂದು ಜನರ ಮನೆಮನೆಗೆ ನೀರು ಕೊಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್ ತಾಲ್ಲೂಕು ಅಧ್ಯಕ್ಷ ಗುರುಮೂರ್ತಿ, ಗೋವಿಂದಸ್ವಾಮಿ, ಶಿವಸ್ವಾಮಿ, ಸುದರ್ಶನ್ ಮತ್ತಿತರರು ಇದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA