ಮೈಸೂರು ಜಿಲ್ಲೆ: ಮೂವರು ಅಯ್ಯಪ್ಪ ಮಾಲಾಧಾರಿಗಳು ಕಪಿಲಾ ನದಿಯಲ್ಲಿ ಮುಳುಗಿ ಜಲಸಮಾಧಿಯಾಗಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡಿನ ಹೆಜ್ಜಿಗೆ ಸೇತುವೆ ಬಳಿ ಘಟನೆ ನಡೆದಿದ್ದು, ಮೃತ ಮೂವರು ತುಮಕೂರು ಮೂಲದ ನಿವಾಸಿಗಳಾಗಿದ್ದಾರೆ.
ಸ್ನಾನ ಮಾಡಲು 6 ಮಂದಿ ನದಿಗೆ ಇಳಿದಿದ್ದಾಗ ದುರಂತ ನಡೆದಿದೆ ಎಂದು ತಿಳಿದು ಬಂದಿದೆ. ಅದರಲ್ಲಿ ಮೂವರು ಮಾಲಾಧಾರಿಗಳು ನದಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಉಳಿದ ಮೂವರು ಕೊಡಗು ಮೂಲದವರಾಗಿದ್ದಾರೆ.


