ಬಾಗಲಕೋಟೆ: ಜಮಖಂಡಿ ನಗರದ ಐತಿಹಾಸಿಕ ತಾಲೂಕಾ ಕ್ರೀಡಾಂಗಣದಲ್ಲಿ ಹುಬ್ಬಳ್ಳಿ ದೇಶಪಾಂಡೆ ಫೌಂಡೇಶನ್, ಯು.ಎಸ್.ಕಮ್ಯೂನಿಕೇಷನ, ಕೃಷಿ,ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಜಿಲ್ಲಾಡಳಿತ, ಜಿಲ್ಲಾ ರಕ್ಷಣಾ ಇಲಾಖೆ, ಜಿಲ್ಲಾ ಪಂಚಾಯತ್ ಸಹಭಾಗಿತ್ವದಲ್ಲಿ ಜಿಲ್ಲೆಯ ಜಮಖಂಡಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ಬೃಹತ್ ಕೃಷಿ ಮೇಳ ನಡೆಯಿತು.
ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಆನಂದ ನ್ಯಾಮಗೌಡ, ದ್ರಾಕ್ಷಿ ಕೃಷಿ ಮೇಳ ಮಾಡಲು ಸಲಹೆ ನೀಡಿದರು. ತಾಳ್ಮೆ, ವಿಶ್ವಾಸದಿಂದ ಕೃಷಿ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಸಾವಯವ ಕೃಷಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ, ಬೆಳೆ ಮತ್ತು ಉತ್ತಮ ದರ ಪಡೆಯಲು ಸಾಧ್ಯವಾಗುವುದು ಎಂದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ, ದೇಶ ರಕ್ಷಣೆ ಮಾಡುವ ಸೈನಿಕ, ದೇಶಕ್ಕೆ ಅನ್ನ ನೀಡುವ ಕೃಷಿಕ ದೇಶದ ಆಸ್ತಿ ಮತ್ತು ಶಕ್ತಿಗಳಾಗಿದ್ದಾರೆ. ರೈತರು ಆಧುನಿಕ ಕೃಷಿಯನ್ನು ಅಳವಡಿಸಿಕೊಂಡು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಶ್ರೀ ಷಟಸ್ತಲ ಬ್ರಹ್ಮ ಶ್ರೀ ಶಿವಲಿಂಗ, ಪಂಡಿತಾರಾದ್ಯ ಶಿವಾಚಾರ್ಯರು, ಶ್ರೀ ಮುತ್ತಿನಕಂತಿ ಹಿರೇಮಠ ಜಮಖಂಡಿ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.
ವೇದಿಕೆಯಲ್ಲಿ ಮಾತೋಶ್ರಿ ಸುನಂದಮ್ಮತಾಯಿ, ಈಶ್ವರ ಕರಬಸನವರ, ಗಂಗಾಧರ, ಮೇಟಿ, ಶಿವಾನಂದ, ಕಡ್ಲಿಮಟ್ಟಿ, ಎಂ.ಎಸ.ಬುಜರುಕ, ರವಿ, ತುಳಸಿಗಿರಿ, ಇತರರು ಇದ್ದರು.
ವರದಿ: ಬಂದೇನವಾಜ ಅ ನದಾಫ್ ನಮ್ಮ ತುಮಕೂರು ಟಿವಿ. ಬಾಗಲಕೋಟೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


