ತುರುವೇಕೆರೆ: ತಾಲೂಕು ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷರಾಗಿ ಸೂಳೆಕೆರೆ ಮೋಹನ್ ಕುಮಾರ್ ಅವರನ್ನು ಮಾಜಿ ಶಾಸಕ ಎಂ ಟಿ ಕೃಷ್ಣಪ್ಪನವರು ಆಯ್ಕೆ ಮಾಡಿ ಅಭಿನಂದಿಸಿದರು.
ಇದೇ ವೇಳೆ ಮಾತನಾಡಿದ ನೂತನವಾಗಿ ಆಯ್ಕೆಯಾದ ಸೂಳೆಕೆರೆ ಮೋಹನ್ ಕುಮಾರ್, ಕ್ಷೇತ್ರ ಅಭಿವೃದ್ಧಿಯಾಗಲು ಇರುವ ಅವಕಾಶಗಳನ್ನು ನಾವುಗಳು ಮೈಮರೆಯಬಾರದು, ಜೆಡಿಎಸ್ ಗೆ ಮತ ನೀಡುವ ಮೂಲಕ ಜೆ ಡಿ ಎಸ್ ಪಕ್ಷವನ್ನು ಬಲಿಷ್ಠಗೊಳಿಸಿ ಜೊತೆಗೆ ಚುನಾವಣಾ ಸಮಯದಲ್ಲಿ ಕೆಲವು ಆಸೆ ಆಮಿಷ ತೋರಿಸುತ್ತಾರೆ. ಯಾವುದೇ ಕಾರಣಕ್ಕೂ ಅಂಥವುಗಳಿಗೆ ಮಣೆ ಹಾಕದೆ ಈ ಬಾರಿ ಎಂ.ಟಿ.ಕೃಷ್ಣಪ್ಪನವರನ್ನು ತಾಲೂಕಿನ ಶಾಸಕರನ್ನಾಗಿ ಆಯ್ಕೆ ಮಾಡುವುದು ನಮ್ಮೆಲ್ಲರ ಗುರಿ ಎಂದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾದ ಗೋಣಿ ತುಮಕೂರು ನಾಗೇಂದ್ರ, ಸೂಳೆಕೆರೆ ಶಂಕರೇಗೌಡ, ಮಂಜುನಾಥ್ . ವೆಂಕಟೇಶ್, ಚಂದ್ರಣ್ಣ, ಗೋಣಿ ತುಮಕೂರು ಮಂಜು, (ಜಲ್ಲಿ) ಮಾದಿಹಳ್ಳಿ ಮಲ್ಲಿಕಾ, ಕಾಂತಣ್ಣ, ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯರಾದ ರಾಘವೇಂದ್ರ ನಗರದ ಕಿರಣ್, ಕಲ್ಕೆರೆ ಅವಿನಾಶ್, ಇನ್ನು ಅನೇಕ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy