nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬೀದಿ ನಾಯಿಗಳ ಮಾಹಿತಿ ನೀಡಲು ಸೂಚನೆ

    December 7, 2025

    ರಾಗಿ ಖರೀದಿ: ನೋಂದಣಿಗೆ ಡಿ.15 ಕೊನೆಯ ದಿನ

    December 7, 2025

    ತಾಯಿ ಚಿಕ್ಕದೇವಮ್ಮನ ಬೆಟ್ಟ–ಇಟ್ನ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಹಕಾರ: ಶಾಸಕ ಅನಿಲ್ ಚಿಕ್ಕಮಾದು

    December 7, 2025
    Facebook Twitter Instagram
    ಟ್ರೆಂಡಿಂಗ್
    • ಬೀದಿ ನಾಯಿಗಳ ಮಾಹಿತಿ ನೀಡಲು ಸೂಚನೆ
    • ರಾಗಿ ಖರೀದಿ: ನೋಂದಣಿಗೆ ಡಿ.15 ಕೊನೆಯ ದಿನ
    • ತಾಯಿ ಚಿಕ್ಕದೇವಮ್ಮನ ಬೆಟ್ಟ–ಇಟ್ನ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಹಕಾರ: ಶಾಸಕ ಅನಿಲ್ ಚಿಕ್ಕಮಾದು
    • ಅರಸೀಕೆರೆಯ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
    • ಧರ್ಮದ ಹೆಸರಿನಲ್ಲಿ ಬುಡಕಟ್ಟು ಆಚರಣೆ, ಪದ್ಧತಿ, ದೈವಾರಾಧನೆ ನಶಿಸುತ್ತಿದೆ: ಸಿ.ಜಿ.ಲಕ್ಷ್ಮೀಪತಿ
    • ಡಿಕೆಶಿ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಸಚಿವ ಕೆ.ಎನ್.ರಾಜಣ್ಣ
    • ವಿವಿಧ ಯೋಜನೆಯಡಿ ಮಹಿಳೆಯರಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ
    • ಡಿಸೆಂಬರ್ 8ರಿಂದ ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಆಹಾರ ಅದಾಲತ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತಂದೆ-ತಾಯಿ ಗುರುಹಿರಿಯರನ್ನು ಗೌರವಿಸಿ: ಪದ್ಮಶ್ರೀ ಮಂಜಮ್ಮ ಜೋಗತಿ
    ತುಮಕೂರು February 26, 2022

    ತಂದೆ-ತಾಯಿ ಗುರುಹಿರಿಯರನ್ನು ಗೌರವಿಸಿ: ಪದ್ಮಶ್ರೀ ಮಂಜಮ್ಮ ಜೋಗತಿ

    By adminFebruary 26, 2022No Comments2 Mins Read
    manjamma jogati

    ತುಮಕೂರು :ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ತಂದೆ-ತಾಯಿ ಹಾಗೂ ಗುರು-ಹಿರಿಯರನ್ನು ಗೌರವಿಸುವ ಪರಿಪಾಠ ಬೆಳೆಸಿಕೊಳ್ಳಬೇಕೆಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಪದ್ಮಶ್ರೀ ಮಂಜಮ್ಮ ಜೋಗತಿ ಕರೆ ನೀಡಿದರು

    ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ಜಾನಪದ ವಿಚಾರಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,  ವಿದ್ಯಾರ್ಥಿ ಜೀವನವು ಅತ್ಯಂತ ಅಮೂಲ್ಯವಾದದ್ದು ಉತ್ತಮ ಸಂಸ್ಕಾರಯುತ ಬದುಕನ್ನು ವಿದ್ಯಾರ್ಥಿದೆಸೆಯಲ್ಲಿ ಅಳವಡಿಸಿಕೊಳ್ಳಬೇಕು. ಗುರು ಹಿರಿಯರು ಮತ್ತು ತಂದೆ-ತಾಯಿ ಗಳಲ್ಲಿ ಅತ್ಯಂತ ಶ್ರದ್ಧೆಯನ್ನು ಹೊಂದಿದವರಾಗಿ ವಿದ್ಯಾಭ್ಯಾಸ ಮಾಡಿದಾಗ ಜೀವನದಲ್ಲಿ ಉತ್ತಮ ಸ್ಥಿತಿಯನ್ನು ತಲುಪಲು ಸಹಕಾರಿಯಾಗುತ್ತದೆ ಎಂದರು.


    Provided by
    Provided by

    ಹರ ಮುನಿದರೆ ಗುರು ಕಾಯುವನು ಆದರೆ ಗುರು ಮುನಿದರೆ ಹರ ಕಾಯುವನೇ? ಎಂಬ ಪ್ರಶ್ನೆಯನ್ನು ದಾಸ ಶ್ರೇಷ್ಠರು ಹಾಗೂ ಯತಿವರೇಣ್ಯರೇ ಕೇಳಿರುವಾಗ ಸಾಮಾನ್ಯ ಜನರಾದ ನಾವು ಗುರುಗಳನ್ನು ಗೌರವಿಸದಿದ್ದರೆ, ಬದುಕಿನಲ್ಲಿ ಉನ್ನತಿ ಕಾಣಲು ಸಾಧ್ಯವಿಲ್ಲ. ಇಂದಿನ ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಮುಂದೆ ಹಲವಾರು ಆಕರ್ಷಣೆಗಳಿದ್ದು ಅವುಗಳು ಅವರ ವ್ಯಕ್ತಿತ್ವವನ್ನು ರಚಿಸಬಹುದು ಅಥವಾ ನಿರ್ಣಾಮ ಮಾಡಬಹುದು, ಬಹಳ ಎಚ್ಛರಿಕೆಯಿಂದ ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದರು.

    ಮೊಬೈಲ್ ಮುಂದೆ ಕಳೆಯುವಷ್ಟು ಸಮಯವನ್ನು ವಿದ್ಯಾರ್ಥಿಗಳು  ಪುಸ್ತಕದೊಂದಿಗೆ ಕಳೆದರೆ ಅವರ ಜೀವನ ಸಂಪದ್ಭರಿತವಾಗುತ್ತದೆ. ಆದರೆ ಇಂದಿನ ದಿನಮಾನದಲ್ಲಿ ಯುವಕ ಯುವತಿಯರು ಸಂಸ್ಕೃತಿಯನ್ನು‌ ಮರೆತು ನಡೆಯುತ್ತಿರುವು ಅತ್ಯಂತ ಕಳವಳದ ವಿಷಯವಾಗಿದೆ. ತಮ್ಮ ಜೀವನದಲ್ಲೂ ಸಹ ಗುರು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದು, ಗುರುಗಳ ವಿರುದ್ಧ ನಡೆದಾಗ ಏನೆಲ್ಲಾ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕಾಗುತ್ತದೆ ಎಂಬುದು ತಮಗೆ ಖುದ್ದು ಅರಿವಾಗಿದೆ. ಅದನ್ನು ತಮ್ಮ ಆತ್ಮಚರಿತ್ರೆಯ ಗುರುವುಗೆ ಕಪಾಳ ಮೋಕ್ಷ ಎಂಬ ಅಧ್ಯಾಯದಲ್ಲಿ ವಿಸ್ತೃತವಾಗಿ ಬರೆಯಲಾಗಿದೆ ಎಂದು ತಿಳಿಸಿದರು. ಗುರುಗಳು ಹಾಗೂ ತಂದೆ ತಾಯಿಗಳ ಆಶೋತ್ತರ ಹಾಗೂ ಸೂಚನೆಗಳ  ಮೇರೆಗೆ ಜೀವನ ನಡಿಸಿ ಬದುಕಿನಲ್ಲಿ ಸಾಧಕರಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

    ವಿಚಾರ ಸಂಕಿರಣದಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆಯ ಹಾಗೂ ಸಮರ್ಥ್ ಫೌಂಡೇಷನ್ ನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಿದ್ದಲಿಂಗಪ್ಪ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟಾರ್ ಶ್ರೀಮತಿ ನಮ್ರತಾ,  ಡಾ.ಡಿ.ಎನ್. ಯೋಗೀಶ್ವರಪ್ಪ, ಡಾ.ಕಾ.ವೆಂ.ಶ್ರೀನಿವಾಸಮೂರ್ತಿ, ಡಾ.ಚಿಕ್ಕಣ್ಣ ಎಣ್ಣೆಕಟ್ಟೆ, ಜಿಲ್ಲಾ ಕಸಾಪ ಸಾಂಸ್ಕೃತಿಕ ಉಪಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಕೆಂಕೆರೆ, ಜೋಗಿಲ ಸಿದ್ಧರಾಜು, ಶಂಕರ್ ಭಾರತೀಪುರ ಮುಂತಾದವರು ಉಪಸ್ಥಿತರಿದ್ದರು‌.

    ವರದಿ: ಎ.ಎನ್. ಪೀರ್ , ತುಮಕೂರು


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ರಾಗಿ ಖರೀದಿ: ನೋಂದಣಿಗೆ ಡಿ.15 ಕೊನೆಯ ದಿನ

    December 7, 2025

    ಧರ್ಮದ ಹೆಸರಿನಲ್ಲಿ ಬುಡಕಟ್ಟು ಆಚರಣೆ, ಪದ್ಧತಿ, ದೈವಾರಾಧನೆ ನಶಿಸುತ್ತಿದೆ: ಸಿ.ಜಿ.ಲಕ್ಷ್ಮೀಪತಿ

    December 7, 2025

    ಡಿಕೆಶಿ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಸಚಿವ ಕೆ.ಎನ್.ರಾಜಣ್ಣ

    December 6, 2025

    Leave A Reply Cancel Reply

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಬೀದಿ ನಾಯಿಗಳ ಮಾಹಿತಿ ನೀಡಲು ಸೂಚನೆ

    December 7, 2025

    ತುಮಕೂರು: ಕೊರಟಗೆರೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿರುವ ಖಾಸಗಿ/ ಸರ್ಕಾರಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಕ್ರೀಡಾ ಸಂಕೀರ್ಣ, ಬಸ್ / ರೈಲ್ವೆ…

    ರಾಗಿ ಖರೀದಿ: ನೋಂದಣಿಗೆ ಡಿ.15 ಕೊನೆಯ ದಿನ

    December 7, 2025

    ತಾಯಿ ಚಿಕ್ಕದೇವಮ್ಮನ ಬೆಟ್ಟ–ಇಟ್ನ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿಗೆ ಸಹಕಾರ: ಶಾಸಕ ಅನಿಲ್ ಚಿಕ್ಕಮಾದು

    December 7, 2025

    ಅರಸೀಕೆರೆಯ ವಿದ್ಯಾರ್ಥಿಗಳು ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

    December 7, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.