ಟರ್ಕಿ : ಟರ್ಕಿಯ ಕಾಂತಾರ್ ಹಳ್ಳಿಯಲ್ಲಿ ಲಿಟಲ್ ಎಸ್ಇ ಎಂಬ 2 ವರ್ಷದ ಬಾಲಕಿ ಮನೆಯ ಹಿಂದಿನ ವಾರಂಡದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಅಲ್ಲೇ ಇದ್ದ. ಹಾವು ಬಾಲಕಿಯನ್ನು ಕಚ್ಚಿದೆ. ಆಗ ಬಾಲಕಿ ಆ ಹಾವಿನ ಬಾಲವನ್ನು ತಿರುಗಿ ಕಚ್ಚುವ ಮೂಲಕ ಹಾವನ್ನು ಕೊಂದಿದ್ದಾಳೆ.
ಬಾಲಕಿ ಹಾವವನ್ನು ಕಚ್ಚಿದ ನಂತರ ಜೋರಾಗಿ ಕಿರುಚಾಡಿದ್ದಾಳೆ. ಕೂಡಲೇ ಅಕ್ಕಪಕ್ಕದ ಮನೆಯವರು ಸೇರಿದ್ದಾರೆ. ತುಟಿ ಅಂಚಿನಲ್ಲಿ ಹಾವಿನ ರಕ್ತ ಮತ್ತು ಬಾಯಿಯಲ್ಲಿ ಹಾವಿನ ತುಂಡನ್ನು ಕಂಡು ಶಾಕ್ ಆಗಿದ್ದಾರೆ.
ನಂತರ ಕೂಡಲೇ ಬಾಲಕಿಯ ತಂದೆ-ತಾಯಿಯನ್ನು ಕರೆದಿದ್ದಾರೆ. ಬಾಲಕಿಯ ಅವಸ್ತೆ ಕಂಡು ತಂದೆ-ತಾಯಿ ಕೂಡ ಆಶ್ಚರ್ಯಗೊಂಡಿದ್ದಾರೆ. ಬಳಿಕ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಆಸ್ಪತ್ರೆಯಲ್ಲಿ ಬಾಲಕಿಯನ್ನು 24 ಗಂಟೆಗಳ ಕಾಲ ನಿಗಾದಲ್ಲಿ ಇರಿಸಲಾಯಿತು ಎಂದು UNILAD ವರದಿ ತಿಳಿಸಿದೆ. ಬಾಲಕಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy