ಎರಡನೇ ಸ್ಪರ್ಧೆಯಲ್ಲಿ ತನ್ನ ಅಹಂ ಮತ್ತು ಅತಿಯಾದ ಆತ್ಮವಿಶ್ವಾಸದಿಂದ ಮತ್ತೊಮ್ಮೆ ಸೋತಿದ್ದ ಮೊಲವು ಇನ್ನು ತನ್ನ ಪಾಡಿಗೆ ತಾನು ಇದ್ದುಬಿಡೋಣ ಎಂದು ಕಾಲ ಕಳೆಯುತ್ತಿರಬೇಕಾದರೆ, ಒಮ್ಮೆ ಮೊಲದ ಮುಖಂಡ ಸ್ಪರ್ಧೆಯ ಮೊಲದ ಬಳಿ ಬಂದು ನೀನು ನೀನಾಗಿಯೇ ಆಮೆಯ ಬಳಿ ಹೋಗಿ ಆವೇಶದ ಮಾತುಗಳನ್ನು ಆಡಿ, ಮತ್ತೊಮ್ಮೆ ಸ್ಪರ್ಧೆಗೆ ಆಹ್ವಾನಿಸಿ ಸೋತಿದ್ದು ನಮ್ಮ ಮೊಲದ ಕುಲಕ್ಕೇ ಅವಮಾನ ಆದಂತೆ, ಆದ ಕಾರಣ ನೀನು ಮತ್ತೊಮ್ಮೆ ಸ್ಪರ್ಧೆಗೆ ಆಹ್ವಾನಿಸಿ ಒಮ್ಮೆಲೇ ಓಡಿ ಆಮೆಯನ್ನು ಸೋಲಿಸಲೇಬೇಕು, ಈ ಬಾರಿ ಕಳೆದ ಬಾರಿಯಂತೆ ಹೊಗಳಿಕೆಯ ಬಾಯಿಗೆ ಕಿವಿಯಾಗಬೇಡ ತಿಳಿಯಿತೇ, ಅದಕ್ಕೆ ಮೊಲವು ಬೇಡ ಮುಖಂಡರೇ , ಮತ್ತೆ ಆಮೆ ಬುದ್ಧಿವಂತಿಕೆಯಿಂದ ಯೋಚಿಸಿ ಏನಾದರೂ ಉಪಾಯ ಮಾಡಿ ನಾವೇ ಸೋಲುವಂತೆ ಮಾಡಿದರೆ, ಎಂದಾಗ ಮುಖಂಡ ಮೊಲವು ಹಾಗಾದರೆ ಹತ್ತಿರ ಬಾ ಎಂದು ಸ್ಪರ್ಧೆಯ ಮೊಲವನ್ನು ಹತ್ತಿರ ಕರೆದು ಕಿವಿಯಲ್ಲಿ ಏನೋ ಹೇಳಿತು. ಇದರಿಂದ ಸಂತಸಗೊಂಡ ಸ್ಪರ್ಧೆಯ ಮೊಲವು ಇದೇ ನಾವು ಗೆಲ್ಲಲು ಸರಿಯಾದ ಮಾರ್ಗ ಎಂದು ಹೇಳುತ್ತಾ ಆಮೆಯ ಮುಖಂಡನ ಗುಹೆಯ ಕಡೆಗೆ ನಡೆಯಿತು.
ಮತ್ತೊಮ್ಮೆ ಆಮೆಯ ಮುಖಂಡನನ್ನು ಹೊರಗೆ ಕರೆದು ನೋಡಿ ಮುಖಂಡರೆ ಈ ಬಾರಿ ನಾನು ಗೆಲ್ಲಲೇ ಬೇಕು, 2 ಸ್ಪರ್ಧೆಯಲ್ಲಿಯೂ ಸೋತು ಜಗದ ಮುಂದೆ ತಲೆತಗ್ಗಿಸಿ ನಡೆಯುತ್ತಿರವು ನಾವು, ನಮ್ಮ ಕುಲ ತಲೆ ಎತ್ತಿ ನಡೆಯುವಂತೆ ಮಾಡಬೇಕು ಹಾಗಾಗಿ ಈ 3ನೇ ಸ್ಪರ್ಧೆಯನ್ನು ಏರ್ಪಡಿಸಲೇ ಬೇಕು ಎಂದಾಗ ಆಮೆಯ ಮುಖಂಡನು ಈಗ ಏನು ಮಾಡುವುದು ಎಂದು ಯೋಚಿಸುತ್ತಿರುವಾಗ ಅಲ್ಲಿಗೆ ಬಂದ ಸ್ಪರ್ಧೆಯ ಆಮೆಯು ಏನೂ ಯೋಚಿಸಬೇಡಿ ಮುಖಂಡರೆ ಸ್ಪರ್ಧೆಗೆ ಒಪ್ಪಿಗೆ ಕೊಡಿ ಎಂದಾಗ ವಿಧಿಯಿಲ್ಲದೆ ಮುಖಂಡ ಆಮೆಯು ಒಪ್ಪಿಗೆ ಕೊಟ್ಟಿತು.
ಅದರಂತೆ ಮಾರನೆ ದಿನವೇ ಸ್ಪರ್ಧೆ ನಡೆಸಲು ತೀರ್ಮಾನಿಸಿ ಕಾಡಿನ ತುಂಬ ಡಂಗೂರ ಸಾರಲಾಯಿತು. ಸ್ಪರ್ಧೆಯ ಆಮೆಯು ಈ ಬಾರಿ ಮೊಲ ತಾನು ಗೆಲ್ಲಲು ನಿಶ್ಚಯಿಸಿ ಬಂದಿರುವಂತೆ ಕಾಣುತ್ತದೆ ಎಂದು ಯೋಚಿಸುತ್ತಾ ಮಲಗಿಕೊಂಡಿತು. ಇತ್ತ ಸ್ಪರ್ಧಿ ಮೊಲವು ತನ್ನ ಗೆಳೆಯನೊಬ್ಬನನ್ನು ಕರೆದು ನೋಡು ನೀನು ಈಗಲೇ ಯಾರಿಗೂ ಕಾಣಿಸದಂತೆ ಹೋಗಿ, ನಾಳೆ ಆಮೆ ಓಡಲಿರುವ ಪಥದಲ್ಲಿ ಮಣ್ಣಿನೊಳಗೆ ಮುಳ್ಳುಗಳನ್ನು ಹೂತು ಬರಬೇಕು, ಆಮೆಯೂ ಕೂಡ ಏನಾದರೂ ಅವಶ್ಯ ಉಪಾಯಮಾಡಿಕೊಂಡು ಬಂದಿರುತ್ತದೆ, ಆದರೆ ಈ ಬಾರಿ ನಾನು ಗೆಲ್ಲಲೇ ಬೇಕು ಎಂದು ಹೇಳಿ ಕಳುಹಿಸಿತು. ಅದರಂತೆ ಇತ್ತ ಆಮೆಯ ಮಿತ್ರ ಆಮೆಯೊಂದು ಕಾಡಿನ ದಾರಿಯಲ್ಲಿ ತನ್ನ ಮನೆಗೆ ನಡೆದು ಬರುವಾಗ ಮೊಲದ ಮೊಲದ ಮಿತ್ರ ಮೊಲವೊಂದು ರಾತ್ರಿ ಕತ್ತಲಲ್ಲಿ ಆಮೆ ಓಡಲಿರುವ ಪಥದಲ್ಲಿ ಮಣ್ಣಿನೊಳಗೆ ಮುಳ್ಳು ಹೂಳುತ್ತಿರುವುದನ್ನು ದೂರದಿಂದ ನೋಡಿತು ಇದನ್ನು ತನ್ನ ಮಿತ್ರನಿಗೆ ಆದಷ್ಟು ಬೇಗ ತಿಳಿಸಬೇಕು ಎಂದು ಮಲಗಿದ್ದ ಮಿತ್ರ ಸ್ಪರ್ಧಿ ಆಮೆಯನ್ನು ಎಬ್ಬಿಸಿ ತಾನು ನೋಡಿದ ವಿಷಯ ತಿಳಿಸಿತು. ಸ್ಪರ್ಧಿ ಆಮೆಯು ಓಹೋ ನನ್ನನ್ನು ನೇರವಾಗಿ ಗೆಲ್ಲಲಾಗದೆ ಕುತಂತ್ರ ಉಪಯೋಗಿಸಿ ಗೆಲ್ಲುವ ಹುನ್ನಾರ ನಡೆಸುತ್ತಿದೆ, ನಾಳೆ ನೋಡಿಕೊಳ್ಳುತ್ತೇನೆ ಹಾಗಾದರೆ ನಾಳೆ ನನ್ನದೇ ಗೆಲುವು ನಿಶ್ಚಿತ ಎಂದು ನೆಮ್ಮದಿಯಿಂದ ಮಲಗಿತು. ಮಾರನೆಯ ದಿನ ಬೆಳಗ್ಗೆ ಸ್ಪರ್ಧೆಯ ಜಾಗಕ್ಕೆ ಎಲ್ಲಾ ಪ್ರಾಣಿಗಳು ಜಮಾಯಿಸಿದವು ಈ ಬಾರಿ ಮೊಲವೇ ಗೆಲ್ಲುವುದು ನಿಶ್ಚಿತ ಎಂದು ಮಾತನಾಡಿಕೊಳ್ಳುತ್ತಿದ್ದವು. ಸ್ಪರ್ಧಾ ಮುಖಂಡ ನರಿ ಸ್ಪರ್ಧಾ ಕಣಕ್ಕೆ ಬಂದು ಆಮೆಯನ್ನು ಮೊಲವನ್ನು ಕಣಕ್ಕೆ ಆಹ್ವಾನಿಸಿತು.
ಕಣಕ್ಕೆ ಬಂದ ಆಮೆ ಮೊಲಗಳು ತಮ್ಮ ತಮ್ಮ ಪಥದ ಬಳಿ ನಿಂತವು. ಮುಖಂಡ ನರಿಯು ಒಂದು, ಎರಡು, ಮೂ..ಎನ್ನುವಾಗಲೇ ಆಮೆಯು ಮುಖಂಡರೇ ಸ್ವಲ್ಪ ನಿಲ್ಲಿ ನಾನು 2 ಬಾರಿ ಗೆದ್ದಿದ್ದೇನೆ, ಈ ಬಾರಿ ನಾನು ಮೊಲ ಗೆಲ್ಲಬೇಕು ಎಂದು ಬಯಸುತ್ತೇನೆ. ಹಾಗಾಗಿ 2 ಬಾರಿ ಓಡಿ ಗೆದ್ದಿರುವ ನನ್ನ ಈ ಪಥದಲ್ಲಿ ಮೊಲ ಓಡಲಿ ಹಾಗೆಯೇ 2 ಬಾರಿ ಮೊಲ ಓಡಿ ಸೋತಿರುವ ಮೊಲದ ಪಥದಲ್ಲಿ ನಾನು ಓಡುತ್ತೇನೆ ಎಂದಾಗ ಅಲ್ಲಿ ಜಮಾಯಿಸಿದ್ದ ಎಲ್ಲ ಪ್ರಾಣಿಗಳು ಆಮೆಯ ಒಳ್ಳೆಯ ಗುಣ ನೋಡಿ ಹೋ ಎಂದು ಕೂಗಾಡಿ ಆಮೆ ಹೇಳುತ್ತಿರುವುದು ಸರಿಯಾಗಿದೆ ಸ್ಪರ್ಧೆ ಆಮೆ ಹೇಳಿದಂತೆ ನಡೆಯಬೇಕು ಎಂದು ಕೂಗಾಡಿದಾಗ ಮೊಲವು ತನ್ನ ಮನದಲ್ಲಿ ಅಯ್ಯೋ ನನ್ನ ಕುತಂತ್ರ ನನಗೆ ತಿರುಗುಮುರುಗು ಆಯಿತಲ್ಲಾ ಎಂದು ಮನದಲ್ಲಿ ಸೋಲಿನ ಭಯ ಕಾಣುತ್ತಾ, ಇಲ್ಲ ಬೇಡ ಬೇಡ ನಾನು ಇದೇ ಪಥದಲ್ಲಿಯ ಓಡುತ್ತೇನೆ ಆಮೆ ತನ್ನ ಪಥದಲ್ಲಿಯೇ ಓಡಲಿ ಎಂದಾಗ, ಮುಖಂಡ ನರಿಯು ಇಲ್ಲ ಇಬ್ಬರ ಪಥ ಬದಲಾವಣೆಯಾಗಲಿ ನಾನು ಪ್ರಾಣಿಗಳ ಕೋರಿಕೆ ಈಡೇರಿಸಬೇಕಿದೆ ಎಂದಾಗ ಮನಸ್ಸಿಲ್ಲದ ಮನಸ್ಸಿನಿಂದ ಪರಸ್ಪರ ಪಥ ಬದಲಿಸಿದವು.
ಅದರಂತೆ ನರಿಯು ಮತ್ತೊಮ್ಮೆ ಒಂದು, ಎರಡು, ಮೂರು ಎನ್ನುತ್ತಲೇ ಮೊಲ ಮತ್ತು ಆಮೆ ಓಡಲು ಪ್ರಾರಂಭಿಸಿದವು. ಆದರೆ ಮೊದಲ ಹೆಜ್ಜೆಯಲ್ಲಿಯೇ ಮೊಲದ ಕಾಲಿಗೆ ಮುಳ್ಳು ಚುಚ್ಚಿಕೊಂಡಿತು ಅಯ್ಯಯ್ಯೋ ಎಂದು ಕುಳಿತುಕೊಂಡು ಮುಳ್ಳು ತೆಗೆದು ಕೊಂಡು ಮತ್ತೊಮ್ಮೆ ಓಡಲು ಪ್ರಾರಂಭಿಸಿತು ಆದರೆ ಮೂರನೇ ಹೆಜ್ಜೆಯಲ್ಲಿಯೇ ಮತ್ತೊಮ್ಮೆ ಮುಳ್ಳು ಚುಚ್ಚಿಕೊಂಡಿತು ಹೀಗೆಯೇ ಮಧ್ಯದ ದಾರಿಗೆ ಬರುವಷ್ಟರಲ್ಲಿ ಹಲವು ಮುಳ್ಳುಗಳು ಕಾಲಿಗೆ ಚುಚ್ಚಿಕೊಂಡು ಇವೆಲ್ಲವನ್ನು ನಿವಾರಿಸಿಕೊಳ್ಳುವಷ್ಟರಲ್ಲಿ ಆಮೆಯು ಪಥದ ಗೆಲುವಿನ ಪಟ್ಟಿ ದಾಟಿತು. ನರಿ ಆಮೆಯೆ 3ನೇ ಸ್ಪರ್ಧೆಯಲ್ಲಿ ಗೆದ್ದಿರುವುದು ಎಂದು ಘೋಷಿಸಿತು. ಆದರೆ ಇಷ್ಟೊಂದು ಮುಳ್ಳು ಆಮೆ ಓಡಬೇಕಿದ್ದ ಹಾದಿಯಲ್ಲಿ ಸಿಕ್ಕಿದ್ದರಿಂದ ಇದು ಮೊಲವು ತಾನು ಗೆಲ್ಲಲು ಮಾಡಿದ ಕುತಂತ್ರ ಎಲ್ಲ ಪ್ರಾಣಿಗಳು ಬಹು ಬೇಗನೆ ಅರ್ಥ ಮಾಡಿಕೊಂಡವು. ಹಾಗೂ ಎಲ್ಲ ಪ್ರಾಣಿಗಳು ಮೊಲಕ್ಕೆ ಛೀಮಾರಿ ಹಾಕಿದವು. ಮೊಲ ಸೋತು ಅವಮಾನದಿಂದ ತಲೆ ತಗ್ಗಿಸಿ ನಿಂತಿತು.
ಈ ಕಥೆಯ ಮುಖ್ಯ ಸಂದೇಶವು ನೀತಿಯನ್ನೂ, ಬುದ್ಧಿವಂತಿಕೆಯನ್ನೂ ಒತ್ತಿಹೇಳುತ್ತದೆ. ಆಮೆಯ ಶಾಂತ ಮತ್ತು ಯುಕ್ತಿಯುಕ್ತ ಯೋಚನೆ ಎದುರಾಳಿಯ ಕುತಂತ್ರವನ್ನು ಸೋಲಿಸುವ ಶಕ್ತಿ ಹೊಂದಿದೆ. ಈ ಕಥೆ ಮೊಲದ ಅಹಂಕಾರ ಮತ್ತು ದುರಾಸೆಯ ವಿರುದ್ಧ ನ್ಯಾಯ ಹಾಗೂ ಶುದ್ಧ ಚಿಂತನೆಯ ಗೆಲುವನ್ನು ಪ್ರತಿಪಾದಿಸುತ್ತದೆ.
ಶೀರ್ಷಿಕೆ:
“ಆಮೆ ಮತ್ತು ಮೊಲದ ಓಟ: ಯುಕ್ತಿಯ ವಿಜಯ”
ಇದು ಕೇವಲ ಓಟದ ಸ್ಪರ್ಧೆಯ ಬಗ್ಗೆ ಅಲ್ಲ, ಬದಲಾಗಿ ಜೀವನದಲ್ಲಿ ನ್ಯಾಯ, ಸತ್ಯ, ಬುದ್ಧಿವಂತಿಕೆ ಮತ್ತು ಸಹನಶೀಲತೆ ಹೇಗೆ ಯಶಸ್ಸಿನ ದಾರಿ ತೋರಿಸುತ್ತವೆ ಎಂಬುದರ ಸ್ಫೂರ್ತಿದಾಯಕ ಕಥೆಯಾಗಿದೆ.
ಓದುಗರಿಗಾಗಿ:
ಈ ಕಥೆ ಕೇವಲ ಆಮೆ ಮತ್ತು ಮೊಲದ ಓಟವಷ್ಟೇ ಅಲ್ಲ, ಇದು ನಮ್ಮ ಜೀವನ ಪಾಠವೂ ಹೌದು. ಒಮ್ಮೆಲ್ಲಾ ನಮ್ಮ ಮುಂದೆ ದೊಡ್ಡ ಅಡ್ಡಿಗಳು ಬಂದರೂ, ಬುದ್ಧಿವಂತಿಕೆ ಮತ್ತು ತಾಳ್ಮೆಯಿಂದ ನಾವು ಅದನ್ನು ಜಯಿಸಬಹುದು.
ನೀವೇ ಯೋಚಿಸಿ:
ಮೊಲವು ತನ್ನ ಶಕ್ತಿಯ ಮೇಲೆ ಹೆಮ್ಮೆಯಿಂದಿದ್ದು, ಕುತಂತ್ರ ಬಳಸಿದರೂ ಸೋತಿತು.
ಆಮೆಯು ಶಾಂತತೆ ಮತ್ತು ಯುಕ್ತಿಯನ್ನೇ ಆಯ್ಕೆ ಮಾಡಿಕೊಂಡಿತು, ಗೆಲುವು ಅದರದೇ ಆಯಿತು.
ನ್ಯಾಯ, ಬುದ್ಧಿಮತ್ತೆ ಮತ್ತು ತಾಳ್ಮೆ ಸದಾ ಜಯಶಾಲಿಯಾಗುತ್ತವೆ.
ಇದು ಓದುಗರಿಗೆ ಸ್ಫೂರ್ತಿ ನೀಡುವ ಕಥೆ –- ಯಾವಾಗಲೂ ಸತ್ಯ ಮತ್ತು ಯುಕ್ತಿಯ ಮಾರ್ಗವೇ ಶ್ರೇಷ್ಠ!

ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4