ದೊಡ್ಡಬಳ್ಳಾಪುರ: ಬೈಕ್ ಮತ್ತು ಪೆಟ್ರೋಲ್ ಟ್ಯಾಂಕರ್ ನಡುವೆ ಅಪಘಾತವಾಗಿ, ವೃದ್ಧರೊಬ್ಬರು ಗಾಯಗೊಂಡಿರುವ ಘಟನೆ ನಗರದ ಟಿ.ಬಿ. ಸರ್ಕಲ್ ಬಳಿ ನಡೆದಿದೆ. ಹನುಮಂತರಾಯಪ್ಪ(60) ಅಪಘಾತಕ್ಕೆ ಒಳಗಾದ ವ್ಯಕ್ತಿ.
ದೊಡ್ಡಬಳ್ಳಾಪುರದ ಕೆಳಗಿನ ಜೂಗಾನಹಳ್ಳಿಯ ನಿವಾಸಿಯಾದ ಇವರು, ದೊಡ್ಡಬಳ್ಳಾಪುರದಿಂದ ದಾಬಸ್ ಪೇಟೆ ಕಡೆ ಪ್ರಯಾಣಿಸುವ ವೇಳೆ ಘಟನೆ ನಡೆದಿದೆ. ವೃದ್ಧನ ಕೈ ಕಾಲುಗಳಿಗೆ ಗಾಯಗಳಾಗಿವೆ.
ಬೈಕ್ ಮೇಲೆ ಟ್ಯಾಂಕರ್ ಹಿಂಬದಿ ಚಕ್ರ ಹರಿದ ಕಾರಣ ಬೈಕ್ ನಜ್ಜುಗುಜ್ಜಾಗಿದ್ದು, ಗಾಯಾಳುವನ್ನು ದೊಡ್ಡಬಳ್ಳಾಪುರದ ಸರಕಾರಿ ಆಸ್ಪತ್ರೆಗೆ ರವಾನೆ ಮಾಡಲಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣೆಯ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.


