ಸಿನಿಮಾಗಳಲ್ಲಿ ಶೃಂಗಾರ ದೃಶ್ಯಗಳು ಅಂದರೆ, ಹಾ ಏನಿದೆ Easy ಎಂದು ಹಲವರು ಭಾವಿಸಿದ್ದಾರೆ. ಆದರೆ ತೆರೆ ಹಿಂದೆ ನಡೆಯುವುದಕ್ಕೂ ನಾವು ಸಿನಿಮಾಗಳಲ್ಲಿ ನೋಡುವುದಕ್ಕೂ ಬಹಳ ವ್ಯತ್ಯಾಸವಿರುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ. ನಿಜವಾಗಲೂ ಅಂತಹ ದೃಶ್ಯಗಳನ್ನು ಹೇಗೆ ಮಾಡಲಾಗುತ್ತದೆ? ಪ್ರಿಪರೇಶನ್ ಹೇಗಿರುತ್ತದೆ ಎಂಬ ಬಗ್ಗೆ ಹಲವು ಕುತೂಹಲಗಳಿವೆ. ಈಗ ಆ ವಿಷಯದ ಕುರಿತು ‘ಮಂಗಳವಾರಂ’ ಫೇಮ್ ನಟಿ ದಿವ್ಯ ಪಿಳ್ಳೈ ಅದನ್ನು ವಿವರಿಸಿದ್ದಾರೆ. ಇತ್ತೀಚೆಗೆ ಸಂದರ್ಶನದಲ್ಲಿ ತನ್ನ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ರೊಮ್ಯಾಂಟಿಕ್ ಸೀನ್ ಅಂದರೆ ಇಬ್ಬರು ಮುದ್ದುಮಾಡುವುದು. ರೊಮ್ಯಾನ್ಸ್ ಮಾಡುವುದೇ ಪ್ರೇಕ್ಷಕರಿಗೆ ಅನಿಸುತ್ತದೆ. ಆದರೆ ಸೆಟ್ ಗಳಲ್ಲಿ ಎಲ್ಲರಮುಂದೆ ಈ ದೃಶ್ಯಗಳಲ್ಲಿ ನಟಿಸುವುದು ಅಷ್ಟು ಸುಲಭದ ವಿಷಯವಲ್ಲ, ಏಕೆಂದರೆ ನುಮಾರು 75 ಕೆ.ಜಿ. ತೂಕದ ಮನುಷ್ಯ ದೇಹದ ಮೇಲೆ ಮಲಗಿದಾಗ ಕ್ಯಾಮರಾಗೆ ಕಾಣುವ ರೀತಿಯಲ್ಲಿ ಎಕ್ಸ್ ಪ್ರೆಶನ್ಸ್ ನೀಡಬೇಕಾಗುತ್ತದೆ. ಆಗ ಮೈಂಡ್ ನಲ್ಲಿ ಬೇರೆ ಆಲೋಚನೆ ಇರುವುದಿಲ್ಲ’.
ಆ ರೋಮ್ಯಾನ್ಸ್ ಅನ್ನು ಎಂಜಾಯ್ ಮಾಡುವುದು ಕೂಡ ಸಾಧ್ಯವಾಗುವುದಿಲ್ಲ, ಇದು ಎಷ್ಟು ಕಷ್ಟ ಎಂಬುದು ನೀವೇ ಯೋಚಿಸಿ. ಹಾಗೆ ರೊಮ್ಯಾಂಟಿಕ್ ಸೀನ್ಸ್ ಗಾಗಿ ತುಂಬಾ ಪ್ರಿಪರೇಷನ್ ಮಾಡಬೇಕಾಗುತ್ತದೆ. ಸಹ ನಟರೊಂದಿಗೆ ಒಟ್ಟಾಗಿ ಮೊದಲು ಡಿಸ್ಕಸ್ ಕೂಡ ಮಾಡಿಕೊಳ್ಳಬೇಕು. ಸೀನ್ ಮಾಡುತ್ತಿರುವಾಗ ನಮಗೆ ತೊಂದರೆ ಅನಿಸಿದರೂ ಸರಿ ಮುಖದಲ್ಲಿ ಆ ಫೀಲಿಂಗ್ ತೋರಿಸಬಾರದು’ ಎಂದು ದಿವ್ಯ ಪಿಳ್ಳೈ ಹೇಳಿದ್ದಾರೆ.
ದಿವ್ಯ ಪಿಳ್ಳೆ ಮೂಲತಃ ಮಲಯಾಳಿ ಫ್ಯಾಮಿಲಿಯಲ್ಲಿ ಹುಟ್ಟಿದವರು. 2015 ರಲ್ಲಿ ಸಿನಿಮಾರಂಗಕ್ಕೆ ಪ್ರವೇಶ ಪಡೆಯುತ್ತಾರೆ. ಸಹಾಯಕ ಪಾತ್ರಗಳನ್ನು ಮಾಡುತ್ತಾ ಕ್ರೇಜ್ ಗಳಿಸುತ್ತಾರೆ. ಬಳಿಕ ಪೂರ್ಣ ಪ್ರಮಾಣದ ನಟಿಯಾಗಿ ‘ಮಂಗಳವಾರಂ’ ಮೂವಿಯೊಂದಿಗೆ ಪಾದರ್ಪಣೆ ಮಾಡುತ್ತಾರೆ. ಇದರ ನಂತರ ‘ತಗ್ಗದೇ ಲೇ’ ಎಂದು ಮತ್ತೊಂದು ಸಿನಿಮಾ ಕೂಡ ಮಾಡಿದ್ದು, ಪ್ರಸ್ತುತ ‘ಬಜೂಕಾ’ ಎಂಬ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296